ಹಬ್ಬದ ಸೀಸನ್‌ಗೆ ಮೊಬೈಲ್​​ ಫೋನ್​ಗಳ ಮೇಲೆ ಬಂಪರ್‌ ಆಫರ್ ಇರುತ್ತೆ. ಒಳ್ಳೆ ಆಫರ್​​ಗಾಗಿ ಕಾಯುತ್ತಿರೋರಿಗೆ ಕಡಿಮೆ ಬಜೆಟ್​​ನಲ್ಲಿ OPPO ಭಾರತದ ಗ್ರ್ಯಾಂಡ್ ಫೆಸ್ಟಿವ್ ಸೇಲ್​​ನಲ್ಲಿ ಭರ್ಜರಿ ಸ್ಮಾರ್ಟ್​ಫೋನ್​ಗಳು ಲಭ್ಯವಿದೆ.

OPPO ಮೊಬೈಲ್​ ಖರೀದಿಗೆ ಯಾವುದೇ ಡೌನ್​ ಪೇಮೆಂಟ್​ ಮಾಡಬೇಕಿಲ್ಲ. EMI ಮೇಲೆ ಕೂಡ ಶೂನ್ಯ ಬಡ್ಡಿ ಇರಲಿದೆ. Reno12 Pro 5G ಮತ್ತು F27 Pro+ 5G ಸೇರಿದಂತೆ ಜನಪ್ರಿಯ OPPO ಸ್ಮಾರ್ಟ್​ಫೋನ್ಸ್ ನೀವು 12 ತಿಂಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಖರೀದಿ ಮಾಡಬಹುದು. ಬಜಾಜ್ ಫೈನಾನ್ಸ್, ಐಡಿಎಫ್‌ಸಿ, ಎಚ್‌ಡಿಬಿ ಫೈನಾನ್ಸ್, ಟಿವಿಎಸ್ ಫೈನಾನ್ಸ್ ಮತ್ತು ಕೋಟಕ್ ಬ್ಯಾಂಕ್‌ 6 ರಿಂದ 9 ತಿಂಗಳ ಅವಧಿಗೆ ಶೂನ್ಯ ಬಡ್ಡಿಗೆ EMI ಆಪ್ಷನ್​​ ನೀಡಿವೆ. ಹಾಗಾಗಿ ಗ್ರಾಹಕರು ಶೂನ್ಯ-ಡೌನ್ ಪಾವತಿ ಯೋಜನೆ ಸುವರ್ಣಾವಕಾಶ ಪಡೆಯಬಹುದು.

ಇನ್ನೊಂದೆಡೆ ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ, ಕೊಟಕ್, ಎಯು ಸ್ಮಾಲ್ ಫೈನಾನ್ಸ್, ಆರ್‌ಬಿಎಲ್ ಬ್ಯಾಂಕ್, ಡಿಬಿಎಸ್ ಮತ್ತು ಫೆಡರಲ್ ಬ್ಯಾಂಕ್‌ನಿಂದ 10 ಪರ್ಸೆಂಟ್​ ಕ್ಯಾಶ್​ಬ್ಯಾಕ್​​ ಸಿಗಲಿದೆ.

ನವೆಂಬರ್​​ 7ನೇ ತಾರೀಕು ಮೊದಲು OPPO ಮೊಬೈಲ್​ ಖರೀದಿಗೆ ಮಾಡೋರು 10 ಲಕ್ಷ ಪಡೆಯಲು ಅರ್ಹರು. ಯಾರು ‘My OPPO ಎಕ್ಸ್‌ಕ್ಲೂಸಿವ್ ರಾಫೆಲ್’ಗೆ ಅರ್ಹರಾಗುತ್ತಾರೋ ಅವರಿಗೆ 10 ಲಕ್ಷ ರೂ. ಸಿಗಲಿದೆ.