ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ರಾಯಲ್​​ ಎನ್​​​ಫೀಲ್ಡ್ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ​ಗೆರಿಲ್ಲಾ 450 ಹೆಸರಿನ ಹೊಸ ಬೈಕನ್ನು ಪರಿಚಯಿಸಿದೆ.

ನೂತನ ಬೈಕನ್ನು 2.39 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದೆ. ಗೆರಿಲ್ಲಾ 450 ಬೈಕ್​​ ಹಿಮಾಲಯನ್​ ಮತ್ತು ಹಂಟರ್​ ಬೈಕ್​ನ ಪರಿಪೂರ್ಣ ಮಿಶ್ರಣವಾಗಿದೆ. 500ಸಿಸಿ ವಿಭಾಗದಲ್ಲಿ ಇದನ್ನು ಪರಿಚಯಿಸಿದೆ.

ಫ್ಲ್ಯಾಶ್​​​, ಡ್ಯಾಶ್​ ಮತ್ತು ಅನಲಾಗ್​​ ರೂಪಾಂತರದಲ್ಲಿ ಖರೀದಿಸಬಹುದಾಗಿದೆ. ಗ್ರಾಹಕರಿಗೆ ಬ್ರೇವಾ ಬ್ಲೂ ಮತ್ತು ಹಂಟರ್​ ಬಣ್ಣದಲ್ಲಿ ಸಿಗುತ್ತಿದೆ. ಕಂಪನಿಯ ಅಧಿಕೃತ ಡೀಲರ್​ ಶಿಪ್​ ಮೂಲಕ ಖರೀದಿಸಬಹುದಾಗಿದೆ​.

ಗೆರಿಲ್ಲಾ 450 ಬೈಕ್​​ ಹಿಮಾಲಯನ್​ ಬೈಕ್​​ನ ರೌಂಡ್​ ಹೆಡ್​ಲ್ಯಾಂಪನ್ನು ಹೊಂದಿದೆ. ಸ್ಪ್ಲಿಟ್​​ ಇಂಡಿಕೇಟರ್​​ ಅನ್ನು ಅಳವಡಿಸಿಕೊಂಡಿದೆ. ನೂತನ ಬೈಕ್​ನಲ್ಲಿ 11 ಲೀಟರ್​ನ ಪೆಟ್ರೋಲ್​ ಟ್ಯಾಂಕ್​ ನೀಡಲಾಗಿದ್ದು, ವಿಭಿನ್ನ ಶೈಲಿಯಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ನೂತನ ಬೈಕ್​ 780 ಎಂಎಂ ಸೀಟರ್​ನೊಂದಿಗೆ ಬಂದಿದೆ​​, ಗ್ರಾಬ್​ ಹ್ಯಾಂಡಲ್ ಇದರಲ್ಲಿದೆ​​.

ಗೆರಿಲ್ಲಾ 450 ಬೈಕ್​ 452ಸಿಸಿ ಸಿಂಗಲ್​ ಸಿಲಿಂಡರ್​​, ಲಿಕ್ವಿಡ್​ ಕೂಲ್ಡ್​ ಎಂಜಿನ್​ ಹೊಂದಿದೆ. 8000 ಆರ್​ಪಿಎಂ ಮತ್ತು 39.47 ಬಿಹೆಚ್​ಪಿ ಗರಿಷ್ಠ ಶಕ್ತಿಯನ್ನು ಹೊಂದಿದೆ. 5,500 ಆರ್​ಪಿಯಂನಲ್ಲಿ 40 ಎನ್​ಎಮ್​ನ ಟಾರ್ಕ್​ ಉತ್ಪಾದಿಸುತ್ತದೆ.

ಸಿಕ್ಸ್​​​ ಸ್ಟೀಡ್​ ಗೇರ್​​ ಬಾಕ್ಸ್​, ಮುಂಭಾಗ 43ಎಂಎಂ ಟೆಲಿಸ್ಕೋಪಿಕ್​​ ಫೋರ್ಕ್​​ ​ಮತ್ತು ಹಿಂಭಾಗ 140 ಎಂಎಂ ಮತ್ತು ಲಿಂಕೇಜ್​​ ಟೈಪ್​ ಮೊನೊ ಶಾಕ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ.