ಬೆಂಗಳೂರು : ನಂದಿನಿ ಹಾಲಿನ ಪ್ಯಾಕೆಟ್‌ಗಳಲ್ಲಿ ಪ್ರಮಾಣ ತುಸು ಹೆಚ್ಚಿಸಿ ದರ ಪರಿಷ್ಕರಣೆ ಮಾಡಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರದಲ್ಲೂ ಪರಿಷ್ಕರಣೆ ಮಾಡಲಾಗುವುದು ಎಂದು ವರದಿಯಾಗಿತ್ತು ಆದರೆ ಒಕ್ಕೂಟ ಇದನ್ನು ಸುಳ್ಳು ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ. ಹಾಗೂ ಇಂತಹ ವದಂತಿಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ದರ ಪರಿಷ್ಕರಣೆ ಸಂಬಧಿತ ವದಂತಿಗಳ ಬಗ್ಗೆ ಕೆಎಂಎಫ್ ಮಾರುಕಟ್ಟೆ ಅಧಿಕಾರಿ ರಘುನಂದನ್ ಪ್ರತಿಕ್ರಿಯೆ ನೀಡಿದ್ದು ಮೊಸರು, ಮಜ್ಜಿಗೆ ಅಥವಾ ಲಸ್ಸಿಯ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ವಿನಾ ಕಾರಣ ಸಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡಲಾಗುತ್ತಿದೆ. ಅಂತಹ ವದಂತಿಗಳನ್ನು ನಂಬಬೇಡಿ ಎಂದಿದ್ದಾರೆ.

