ಆನ್‌ಲೈನ್ ತ್ವರಿತ ವಾಣಿಜ್ಯ ಆಪ್‌ಗಳಲ್ಲಿ ವಿಷಕಾರಿ ಧತ್ತೂರ ಹಣ್ಣು ಹಾಗೂ ಬೀಜಗಳನ್ನು ಮಾನವ ಬಳಕೆಯ ಆಹಾರ ಪದಾರ್ಥವೆಂದು FSSAI ಲೇಬಲ್‌ನೊಂದಿಗೆ ಮಾರಾಟ ಮಾಡುತ್ತಿರುವ ಕುರಿತು ಕ್ರಮ ವಹಿಸಿರುವ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್‌ ಸಂಸ್ಥೆಗಳ ಆಹಾರ ಪರವಾನಗಿ ಅಮಾನತುಗೊಳಿಸಿ ಆದೇಶಿಸಿದೆ.

ಅಲ್ಲದೆ, ಈ ಸಂಸ್ಥಗಳು ತಕ್ಷಣವೇ ಈ ಧತ್ತೂರ ಹಣ್ಣು-ಬೀಜಗಳ ಮಾರಾಟದ ಪ್ರದರ್ಶನ, ಜಾಹೀರಾತು, ಸೇರಿದಂತೆ ವಿತರಣೆಯನ್ನು ಬಂದ್‌ ಮಾಡುವಂತೆ ತಿಳಿಸಿದೆ.

ಇ-ಕಾಮರ್ಸ್‌ ಸಂಸ್ಥೆಗಳಲ್ಲಿ ಧತ್ತೂರ ಹಣ್ಣು-ಬೀಜಗಳ ಮಾರಾಟದ ವಿರುದ್ದ ಫುಡ್‌ ಸೇಫ್ಟ್‌ ಇಲಾಖೆ ಸಮರ ಸಾರಿದೆ. FSSAI ಲೇಬಲ್‌ನೊಂದಿಗೆ ಮಾನವ ಬಳಕೆಗೆ ವಿಷಕಾರಿ ಧತ್ತೂರ ಹಣ್ಣು-ಬೀಜ ಮಾರಾಟ ಮಾಡುತ್ತಿದ್ದ ಅಮೆಜಾನ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ ಸಂಸ್ಥೆಗಳ ಆಹಾರ ಪರವಾನಗಿ ಅಮಾನತುಗೊಳಿಸಿ ಫುಡ್‌ ಸೇಫ್ಟಿ ಇಲಾಖೆ ಆದೇಶ ಹೊರಡಿಸಿದೆ.

ತಕ್ಷಣವೇ ಇ-ಕಾರ್ಮಸ್‌ ಫ್ಲಾಟ್‌ಫಾರ್ಮ್‌ಗಳಲ್ಲಿ ಧತ್ತೂರ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಬಂದ್‌ ಮಾಡುವಂತೆ ಖಡಕ್‌ ಸೂಚನೆ ನೀಡಲಾಗಿದೆ.

View this post on Instagram

A post shared by News Karnataka (@newskarnataka)