ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಜುಲೈ 17, ಬುಧವಾರದ ಪೆಟ್ರೋಲ್, ಡೀಸೆಲ್ ದರವನ್ನು ಬಿಡುಗಡೆ ಮಾಡಿವೆ. ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ.

ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್​ಗೆ 85 ಡಾಲರ್​ಗಿಂತ ಕಡಿಮೆ ಇದೆ, ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾತೈಲವು ಪ್ರತಿ ಬ್ಯಾರೆಲ್​ಗೆ 84.65 ಡಾಲರ್​ನಷ್ಟಿದ್ದರೆ, ಡಬ್ಲ್ಯೂಟಿಐ ತೈಲ ಪ್ರತಿ ಬ್ಯಾರೆಲ್​ಗೆ 81.67 ಡಾಲರ್​ನಷ್ಟಿದೆ.

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.44 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.76 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ.

ಗುರುಗ್ರಾಮ : ಪ್ರತಿ ಲೀಟರ್ ಪೆಟ್ರೋಲ್ 95.19 ರೂ. ಮತ್ತು ಡೀಸೆಲ್ ಲೀಟರ್‌ಗೆ 88.05 ರೂ.
ಬೆಂಗಳೂರು : ಪೆಟ್ರೋಲ್ ಲೀಟರ್‌ಗೆ 102.86 ಮತ್ತು ಡೀಸೆಲ್ ಲೀಟರ್‌ಗೆ 88.94 ರೂ.
ಚಂಡೀಗಢ : ಲೀಟರ್‌ಗೆ ಪೆಟ್ರೋಲ್‌ ರೂ 94.24 ಮತ್ತು ಡೀಸೆಲ್‌ ರೂ 82.40.
ಹೈದರಾಬಾದ್ : ಪೆಟ್ರೋಲ್ ಲೀಟರ್‌ಗೆ 107.41 ಮತ್ತು ಡೀಸೆಲ್ ಲೀಟರ್‌ಗೆ 95.65 ರೂ.
ಜೈಪುರ : ಪ್ರತಿ ಲೀಟರ್ ಪೆಟ್ರೋಲ್ ರೂ 104.88 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ರೂ 90.36
ಪಾಟ್ನಾ : ಪ್ರತಿ ಲೀಟರ್ ಪೆಟ್ರೋಲ್ ರೂ 105.18 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 92.04 ರೂ.
ಲಕ್ನೋ : ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 94.65 ಮತ್ತು ಡೀಸೆಲ್ ಲೀಟರ್‌ಗೆ 87.76 ರೂ.