ಬೆಂಗಳೂರು: ಮದರ್ ಡೈರಿಯು ದೆಹಲಿ-ಎನ್‌ಸಿಆರ್‌ನಲ್ಲಿ ಹಾಲಿನ ದರದಲ್ಲಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ.

ದೆಹಲಿ-ಎನ್‌ಸಿಆರ್ ಮತ್ತು ಇತರ ಮಾರುಕಟ್ಟೆಗಳಲ್ಲಿ ಸೋಮವಾರದಿಂದಿಂದಲೇ ಹಾಲಿನ ಎಲ್ಲಾ ವಿಧಗಳ ಮೇಲೆ ಬೆಲೆ ಏರಿಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಮುಂಚಿತವಾಗಿಯೇ ಈ ನಿರ್ಧಾರ ಪ್ರಕಟವಾಗಿದೆ.

ಒಂದು ವರ್ಷದಿಂದ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಹಾಲಿನ ಬೆಲೆಗಳನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲಾಗುತ್ತಿದೆ ಎಂದು ಮದರ್ ಡೈರಿ ಹೇಳಿದೆ.

ಅಮುಲ್​ ಕಂಪನಿಯು ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂ.ಗಳಷ್ಟು ಹೆಚ್ಚಿಸಿ ಸೋಮವಾರ ಬೆಳಗ್ಗೆ ಪ್ರಕಟಣೆ ಹೊರಡಿಸಿತ್ತು.ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರತಿ ಲೀಟರ್​ಗೆ 3 ರೂ. ಹೆಚ್ಚಳ ಮಾಡಿತ್ತು.

ಬೆಲೆ ಏರಿಕೆ ನಂತರ ಒಂದು ಲೀಟರ್‌ ಟೋನ್ಡ್ ಹಾಲಿಗೆ 42 ರೂ., ಹೋಮೋಜೆನೈಸ್ಡ್ ಹಾಲಿಗೆ 43 ರೂ., ಪಾಶ್ಚರೀಕರಿಸಿದ ಹಾಲಿಗೆ 46 ರೂ. ಮತ್ತು ಶುಭಂ ವಿಶೇಷ ಹಾಲಿಗೆ 48 ರೂ. ದರ ನಿಗದಿಯಾಗಿತ್ತು.