ಅನೇಕಾರು ಬ್ರ್ಯಾಂಡ್‌ಗಳ ಐಸ್‌ಕ್ರೀಮ್‌ಗಳು ಲಭ್ಯವಿದೆ.ಅವುಗಳಲ್ಲಿ ಕೆಲವೇ ಕೆಲವು ಬ್ರ್ಯಾಂಡ್‌ಗಳು ಅತ್ಯುತ್ತಮ ರುಚಿಯ ಜೊತೆಗೆ ಹೆಚ್ಚಿನ ಖ್ಯಾತಿಯನ್ನು ಪಡೆದಿರುತ್ತವೆ. ನಮ್ಮ ಕರ್ನಾಟಕದಲ್ಲಿ ಬೆಸ್ಟ್‌ ಐಸ್‌ಕ್ರೀಮ್‌ ಎಂದಾಗ ಹೆಚ್ಚಿನವರಿಗೆ ನೆನಪಾಗುವುದು ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ʼಗಡ್‌ಬಡ್‌ʼ ಐಸ್‌ಕ್ರೀಮ್.‌ ಈ ಐಸ್‌ಕ್ರೀಮ್‌ ಇದೀಗ ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಜೊತೆಗೆ ಬೆಂಗಳೂರಿನ ಕಾರ್ನರ್‌ ಹೌಸ್‌ನ ಜನಪ್ರಿಯ ಫ್ಲೇವರ್‌ಗಳಲ್ಲಿ ಒಂದಾದ ಡೈತ್‌ ಬೈ ಚಾಕೊಲೇಟ್‌ ಕೂಡಾ ಐಕಾನಿಕ್‌ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಆನ್‌ಲೈನ್‌ ಟ್ರಾವೆಲ್‌ ಮತ್ತು ಫುಡ್‌ ಗೈಡ್‌ ʼಟೇಸ್ಟ್‌ ಅಟ್ಲಾಸ್‌ʼ ವಿಶ್ವದ ಟಾಪ್‌ 100 ಐಕಾನಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ನಮ್ಮ ಕರ್ನಾಟಕದ ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ಫೇಮಸ್‌ ಐಸ್‌ಕ್ರೀಮ್‌ಗಳಲ್ಲಿ ಒಂದಾದ ಗಡ್‌ಬಡ್‌ ಮತ್ತು ಬೆಂಗಳೂರಿನ ಕಾರ್ನರ್‌ ಹೌಸ್‌ನ ಡೆತ್‌ ಬೈ ಚಾಕೊಲೇಟ್‌ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಅಷ್ಟೇ ಅಲ್ಲದೇ ಮುಂಬೈನ ಕೆ ರುಸ್ತುಮ್‌ & ಕಂ. ನ ʼಮ್ಯಾಂಗೋ ಸ್ಯಾಂಡ್‌ವಿಚ್ʼ, ಮುಂಬೈನ ನ್ಯಾಚುರಲ್‌ ಐಸ್‌ಕ್ರೀಮ್‌ ಕಂಪೆನಿಯ ʼಟೆಂಡರ್‌ ಕೋಕನಟ್‌ʼ ಫ್ಲೇವರ್‌ ಮತ್ತು ಮುಂಬೈನ ಅಪ್ಸರಾ ಐಸ್‌ಕ್ರೀಮ್‌ನ ʼಗ್ವಾವʼ ಫ್ಲೇವರ್‌ ಐಸ್‌ಕ್ರೀಮ್‌ ಕೂಡಾ ವಿಶ್ವದ ಟಾಪ್‌ 100 ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.