ದೀಪಾವಳಿ ಸಂಭ್ರಮಕ್ಕೆ ವಿವಿಧ ಮಾರುಕಟ್ಟೆಯಲ್ಲಿ ಸಡಗರ ಆರಂಭವಾಗಿದೆ ಖರೀದಿಯ ಪ್ರಕ್ರಿಯೂ ಜೋರಾಗಿದೆ. ಪೂರಕ ವಾಗಿ ಚಿನ್ನಾಭರಣ ಮಳಿಗೆಯಲ್ಲಿ ದೀಪಾವಳಿ ಖುಷಿಯನ್ನು ಇಮ್ಮಡಿಗೊಳಿಸುತ್ತಿದೆ.
ಅತ್ಯಂತ ಹೆಚ್ಚು ಚಿನ್ನಾಭರಣ ಖರೀದಿಸುವ ನಗರಗಳ ಪೈಕಿ ದೇಶದಲ್ಲೇ ಕರಾವಳಿ ಜಿಲ್ಲೆ ಮುಂಚೂಣಿಯಲ್ಲಿದೆ. ಆಭರಣ ಖರೀದಿಸುವುದು ಇಲ್ಲಿ ಪ್ರತಿಷ್ಠೆ, ಆರ್ಥಿಕ ಲೆಕ್ಕಾಚಾರ ಎಂಬ ಗುಣ ಲಕ್ಷಣಕ್ಕಿಂತಲೂ ಅದು ಭಾವನಾತ್ಮಕ ಬೆಸುಗೆಯ ಕೊಂಡಿ.
ಶುಭ ಸಮಾರಂಭದಿಂದ ಆರಂಭವಾಗಿ ಶುಭ ದಿನದಂದು ಚಿನ್ನಾಭರಣ ಖರೀದಿಸುವುದು ಇಲ್ಲಿ ವಾಡಿಕೆ ಯಾಗಿದೆ. ಈ ಪೈಕಿ ದೀಪಾವಳಿಯ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಸಂಭ್ರಮಕ್ಕೆ ವಿಶೇಷ ಮಹತ್ವವಿದೆ. ದರ ಸ್ವಲ್ಪ ಏರಿದ್ದರೂ ಹಬ್ಬದ ಸಂಭ್ರಮ ಒಳಗೊಂಡ ದೀಪಾವಳಿ ಕಾಲಕ್ಕೆ ಚಿನ್ನಾಭರಣ ಖರೀದಿ ಸಂಭ್ರಮ ಬಹಳಷ್ಟು ಇರುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

