ಬೆಂಗಳೂರು: ಚಿನ್ನದ ಬೆಲೆ ನಿರೀಕ್ಷೆಯಂತೆ ತುಸು ಕಡಿಮೆ ಆಗಿದೆ. ಆದರೆ, ಸೆಪ್ಟಂಬರ್​ನಲ್ಲಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಇಳಿಕೆ ಮಾಡುವ ಸುಳಿವು ಕೊಟ್ಟಿದ್ದು, ಅದರ ಪರಿಣಾಮವು ಚಿನಿವಾರ ಪೇಟೆಯ ಮೇಲೆ ಆಗಲಿದೆ. ಚಿನ್ನ, ಬೆಳ್ಳಿ ಬೆಲೆ ಇಂದು ಶುಕ್ರವಾರ ಏರಿಕೆ ಆಗುವ ಸಾಧ್ಯತೆ ಇದೆ.

ಸದ್ಯ 24 ಕ್ಯಾರಟ್​ನ ಅಪರಂಜಿ ಅಥವಾ ಶುದ್ಧ ಚಿನ್ನದ ಬೆಲೆ 7,287 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,490 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ: 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,800 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,870 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 870 ರೂ, ಇದೆ. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,800 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,870 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 849 ರೂ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು 66,800 ರೂ, ಚೆನ್ನೈ 66,800 ರೂ, ಮುಂಬೈ 66,800 ರೂ, ದೆಹಲಿ 66,950 ರೂ, ಕೋಲ್ಕತಾ 66,800 ರೂ, ಕೇರಳ 66,800 ರೂ, ಅಹ್ಮದಾಬಾದ್ 66,850 ರೂ, ಜೈಪುರ್ 66,950 ರೂ, ಲಕ್ನೋ 66,950 ರೂ, ಭುವನೇಶ್ವರ್ 66,800 ರೂ ಇದೆ.