ಇದೀಗ ಜನಪ್ರಿಯ ಹುವಾಯಿ ಕಂಪನಿ ಹೊಸ ಪ್ಲಿಪ್ ಫೋನನ್ನು ಬಿಡುಗಡೆ ಮಾಡಿದೆ. ಹುವಾಯಿ ನೋವಾ ಪ್ಲಿಪ್ ನೂತನ ಮಡಚುವ ಫೋನನ್ನು ಪರಿಚಯಿಸಿದೆ.
12ಜಿಬಿ RAM ಆಯ್ಕೆಯಲ್ಲಿ ಪರಿಚಯಿಸಿದ ನೂತನ ಫೋನ್ ಎರಡು ಡಿಸ್ಪ್ಲೇಯೊಂದಿಗೆ ಬಂದಿದೆ. ಅಂದಹಾಗೆಯೇ ನೂತನ ಸ್ಮಾರ್ಟ್ಫೋನ್ ಬಿಡುಗಡೆಗೊಂಡ 72 ಗಂಟೆಗಳಲ್ಲಿ 45 ಸಾವಿರ ಯುನಿಟ್ಗಳಷ್ಟು ಮಾರಾಟ ಕಂಡಿದೆ.
ಹುವಾಯಿ ನೋವಾ ಪ್ಲಿಪ್ ಸ್ಮಾರ್ಟ್ಫೊನ್ನಲ್ಲಿ 32 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ, 66 ವ್ಯಾಟ್ ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಹುವಾಯಿ ನೋವಾ ಪ್ಲಿಪ್ 1136×2690 ಪಿಕ್ಸೆಲ್ ರೆಸಲ್ಯೂಶನ್ನೊಂದಿಗೆ 6.94 ಇಂಚಿನ LTPO OLED ಡಿಸ್ಪ್ಲೇಯನ್ನು ಹೊಂದಿದೆ.
ಜೊತೆಗೆ 480×480 ಪಿಕ್ಸೆಲ್ ರೆಸಲ್ಯೂಶನ್ನ 2.14 ಇಂಚಿನ ಸೆಕೆಂಡರಿ ಡಿಸ್ಪ್ಲೇಯನ್ನು ಸಹ ಹೊಂದಿದೆ. 120HZ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ 1ಟಿಬಿ ತನಕ ಆಂತರಿಕ ಸಂಗ್ರಹಣೆಯ ಆಯ್ಕೆಯಲ್ಲೂ ಸಿಗುತ್ತಿದೆ.
ಸ್ಮಾರ್ಟ್ಫೋನ್ನಲ್ಲಿ ಫೋಟೋಗ್ರಫಿಗಾಗಿ ಡ್ಯುಯೆಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. 50 ಮೆಗಾಫಿಕ್ಸೆಲ್ ಲೆನ್ಸ್ನೊಂದಿಗೆ 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಆ್ಯಂಗಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ನೂತನ ಸ್ಮಾರ್ಟ್ಫೊನ್ನಲ್ಲಿ 4000 mAh ಬ್ಯಾಟರಿ ನೀಡಲಾಗಿದ್ದು, 66 ವ್ಯಾಟ್ ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ. ಇದಲ್ಲಿದೆ ಫೋನ್ 4.2 ಹಾರ್ಮೊನಿಒಎಸ್ನಿಂದ ಕಾರ್ಯ ನಿರ್ವಹಿಸುತ್ತದೆ. ಗ್ರಾಹಕರಿಗಾಗಿ ಹಸಿರು, ಪಿಂಕ್, ಝಿರೋ ವೈಟ್ ಆ್ಯಂಡ್ ಸ್ಟಾರಿ ಬ್ಲಾಕ್ ಬಣ್ಣದಲ್ಲಿ ಸಿಗುತ್ತಿದೆ. 62 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ.

