ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳುಮತ್ತೆ ಏರುಗತಿಗೆ ಬಂದಿವೆ. ಶುಕ್ರವಾರ ಚಿನ್ನದ ಬೆಲೆ ಗ್ರಾಮ್ಗೆ 20 ರೂನಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ ಒಂದು ರೂನಷ್ಟು ಏರಿಕೆ ಆಗಿದೆ. ವಿದೇಶಗಳಲ್ಲೂ ಈ ಅಮೂಲ್ಯ ಲೋಹಗಳಿಗೆ ಬೇಡಿಕೆ ಬಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,300 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,420ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,550 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 67,300 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,550 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ನೋಡುವುದಾದರೇ, ಬೆಂಗಳೂರು: 67,300 ರೂ., ಚೆನ್ನೈ: 67,800 ರೂ., ಮುಂಬೈ: 67,300 ರೂ., ದೆಹಲಿ: 67,450 ರೂ., ಕೋಲ್ಕತಾ: 67,300 ರೂ., ಕೇರಳ: 67,300 ರೂ., ಅಹ್ಮದಾಬಾದ್: 67,350 ರೂ., ಜೈಪುರ್: 67,450 ರೂ., ಲಕ್ನೋ: 67,450 ರೂ ಭುವನೇಶ್ವರ್: 67,300 ರೂ. ಇದೆ.

