ಬೆಂಗಳೂರು : ಚಿನ್ನದ ಬೆಲೆ ಕುಸಿಯುವುದು ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ. ನಾಲ್ಕು ತಿಂಗಳ ಹಿಂದಿದ್ದ ಮಟ್ಟಕ್ಕೆ ಬೆಲೆ ಇಳಿದಿದೆ. ಮಾರ್ಚ್ 29ಕ್ಕೆ 22 ಗ್ರಾಮ್ ಚಿನ್ನದ ಬೆಲೆ 6,300 ರೂ ಇತ್ತು. ಇವತ್ತೂ ಕೂಡ ಅದೇ ಬೆಲೆಗೆ ಇಳಿದಿದೆ. ಆರಂಭಿಸಿತಾದರೂ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಇಳಿಸಿದ ಬಳಿಕ ತೀವ್ರ ಮಟ್ಟದಲ್ಲಿ ಭಾರತದಲ್ಲಿ ಬೆಲೆ ಕುಸಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 68,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,425 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 28ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,730 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,730 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 842.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 63,000 ರೂ
  • ಚೆನ್ನೈ: 64,150 ರೂ
  • ಮುಂಬೈ: 63,000 ರೂ
  • ದೆಹಲಿ: 63,150 ರೂ
  • ಕೋಲ್ಕತಾ: 63,000 ರೂ
  • ಕೇರಳ: 63,000 ರೂ
  • ಅಹ್ಮದಾಬಾದ್: 63,050 ರೂ
  • ಜೈಪುರ್: 63,150 ರೂ
  • ಲಕ್ನೋ: 63,150 ರೂ
  • ಭುವನೇಶ್ವರ್: 63,000 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,510 ರಿಂಗಿಟ್ (63,130 ರುಪಾಯಿ)
  • ದುಬೈ: 2,660 ಡಿರಾಮ್ (60,640 ರುಪಾಯಿ)
  • ಅಮೆರಿಕ: 720 ಡಾಲರ್ (60,710 ರುಪಾಯಿ)
  • ಸಿಂಗಾಪುರ: 1000 ಸಿಂಗಾಪುರ್ ಡಾಲರ್ (62,010 ರುಪಾಯಿ)
  • ಕತಾರ್: 2,710 ಕತಾರಿ ರಿಯಾಲ್ (62,240 ರೂ)
  • ಸೌದಿ ಅರೇಬಿಯಾ: 2,720 ಸೌದಿ ರಿಯಾಲ್ (60,710 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (62,320 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (59,030 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,425 ರೂ
  • ಚೆನ್ನೈ: 8,900 ರೂ
  • ಮುಂಬೈ: 8,450 ರೂ
  • ದೆಹಲಿ: 8,450 ರೂ
  • ಕೋಲ್ಕತಾ: 8,450 ರೂ
  • ಕೇರಳ: 8,900 ರೂ
  • ಅಹ್ಮದಾಬಾದ್: 8,450 ರೂ
  • ಜೈಪುರ್: 8,450 ರೂ
  • ಲಕ್ನೋ: 8,450 ರೂ
  • ಭುವನೇಶ್ವರ್: 8,900 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.