ಚಿನ್ನದ ದರದಲ್ಲಿ ಇಂದು ಏರಿಕೆ ಕಂಡಿದೆ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರದ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 76 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,43,290 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 70 ರೂ. ಏರಿಕೆಯಾಗಿ, ಹತ್ತು ಗ್ರಾಂಗೆ 1,31,350 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 57 ರೂ. ಹೆಚ್ಚಾಗಿ, ಹತ್ತು ಗ್ರಾಂಗೆ 1,07,470 ರೂ. ಗೆ ತಲುಪಿದೆ.

ಜುಲೈ 18 ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,329 (+76) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,135 (+70) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,747 (+57) ರೂ. ಬೆಲೆಗೆ ಬಂದು ನಿಂತಿದೆ.

ಮಂಗಳೂರಿನಲ್ಲಿ ಬೆಳ್ಳಿಯ ಮೌಲ್ಯ ಮೇ ಆರಂಭದಲ್ಲಿ ಪ್ರತಿ ಕೆಜಿಗೆ 2,90,000 ಲಕ್ಷ ರೂ.ವರೆಗೂ ಏರಿತ್ತು. ಮೇ 13ರಂದು ಪ್ರತಿ ಕೆಜಿಗೆ 3,30,000ಕ್ಕೆ ಏರಿದ ನಂತರ, ಬಹುತೇಕ ಮೇ ತಿಂಗಳಿಡೀ ಬೆಳ್ಳಿಯ ಮೌಲ್ಯ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಆದರೆ ಜೂನ್ ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ 2,40,000 ರೂ.ಗೆ ಬಂದು ನಿಂತಿತ್ತು.

ಜುಲೈ ಆರಂಭದಲ್ಲಿ ಅಲ್ಪಮಟ್ಟಿಗೆ ಏರಿಳಿತ ಕಂಡು ಪ್ರತಿ ಕೆಜಿಗೆ 2,50,000 ರೂ.ಗೆ ಬಂದಿತ್ತು. ಕಳೆದ ಶನಿವಾರದ ನಂತರ 2,35,000 ರೂ.ಗೆ ಸ್ಥಿರವಾಗಿದ್ದ ಬೆಳ್ಳಿಯ ದರ ಶುಕ್ರವಾರ ಪ್ರತಿ ಗ್ರಾಂಗೆ 5 ರೂ. ಇಳಿಕೆಯಾಗಿ ಮೂರು ತಿಂಗಳಲ್ಲೇ ಕನಿಷ್ಠ ದರವಾದ ಪ್ರತಿ ಕೆಜಿಗೆ 2,30,000 ರೂ.ಗೆ ಬಂದಿದೆ. ಈ ಶನಿವಾರವ ಅದೇ ಬೆಲೆಗೆ ಸ್ಥಿರವಾಗಿದೆ.