ಬೆಂಗಳೂರು: ಚಿನ್ನ, ಬೆಳ್ಳಿ ಬೆಲೆ ಇಂದೂ ಕೂಡ ಭಾರೀ ಇಳಿಕೆಯಾಗಿದೆ. ಭಾರತದಲ್ಲಿ ಮಾತ್ರವೇ ಈ ಪರಿ ಇಳಿಕೆ ಆಗಿರುವುದು.
ವಿದೇಶಗಳಲ್ಲಿ ಚಿನ್ನದ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯವಾಗಿಲ್ಲ. ಬಜೆಟ್ನಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲೆ ಆಮದು ಸುಂಕ ಇಳಿಸಿರುವ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಬೆಲೆ ಸತತವಾಗಿ ಕುಸಿಯುತ್ತಿದೆ. ಭಾರತದಲ್ಲಿ ಆಭರಣ ಚಿನ್ನ ಗ್ರಾಮ್ಗೆ 6,400 ರೂಗೆ ಇಳಿದಿದೆ. ಸೌದಿಯಲ್ಲಿ ಚಿನ್ನದ ಬೆಲೆ 6,200 ರೂನಷ್ಟಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 64,000 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 69,820 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 64,000 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,450 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 64,000 ರೂ., ಚೆನ್ನೈ: 64,300 ರೂ., ಮುಂಬೈ: 64,000 ರೂ., ದೆಹಲಿ: 64,150 ರೂ., ಕೋಲ್ಕತಾ: 64,000 ರೂ., ಕೇರಳ: 64,000 ರೂ., ಅಹ್ಮದಾಬಾದ್: 64,050 ರೂ., ಜೈಪುರ್: 64,150 ರೂ., ಲಕ್ನೋ: 64,150 ರೂ. ಭುವನೇಶ್ವರ್: 64,000 ರೂ.ಇದೆ.

