ಬೆಂಗಳೂರು: ಸತತ ಮೂರ್ನಾಲ್ಕು ದಿನ ಏರಿಕೆ ಆಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ತಗ್ಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 10 ಪೈಸೆ ತಗ್ಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಕಡಿಮೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 68,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,840 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,470 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 68,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,450 ರೂಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 68,600 ರೂ., ಚೆನ್ನೈ: 69,050 ರೂ., ಮುಂಬೈ: 68,600 ರೂ., ದೆಹಲಿ: 68,750 ರೂ., ಕೋಲ್ಕತಾ: 68,600 ರೂ., ಕೇರಳ: 68,600 ರೂ., ಅಹ್ಮದಾಬಾದ್: 68,650 ರೂ., ಜೈಪುರ್: 68,750 ರೂ., ಲಕ್ನೋ: 68,750 ರೂ. ಭುವನೇಶ್ವರ್: 68,600 ರೂ ಇದೆ.