ನವದೆಹಲಿ: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಶುಕ್ರವಾರ ಒಂದೇ ದಿನ 175 ರೂ ತಗ್ಗಿದೆ. ಈ ಒಂದೇ ವಾರದಲ್ಲಿ ಬೆಲೆ ಹತ್ತಿರಹತ್ತಿರ 500 ರೂಗಳಷ್ಟು ಕಡಿಮೆ ಆಗಿದೆ. ಚಿನ್ನದಂತೆ ಬೆಳ್ಳಿ ಬೆಲೆಯೂ ಈ ವಾರ ಕುಸಿದಿದೆ. ಬೆಲೆ 220 ರೂಗೆ ಇಳಿದಿದೆ.
ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನ, ಬೆಳ್ಳಿ ಬೆಲೆಗಳು ಕುಸಿದಿವೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ, ಬೆಳ್ಳಿ ಬೆಲೆಗಳೂ ಕಡಿಮೆಗೊಂಡಿವೆ. ಸ್ಪಾಟ್ ಚಿನ್ನದ ಬೆಲೆ ಒಂದು ಗ್ರಾಮ್ಗೆ 12,273 ರೂಗೆ ಇಳಿದಿದೆ. ಸ್ಪಾಟ್ ಬೆಳ್ಳಿ ಬೆಲೆ 166 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,42,480 ರುಪಾಯಿ ಆಗಿದೆ.
100 ಗ್ರಾಮ್ ಬೆಳ್ಳಿ ಬೆಲೆ 22,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,30,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 22,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,248, 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,060, 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,686, ಬೆಳ್ಳಿ ಬೆಲೆ 1 ಗ್ರಾಂಗೆ: 220 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ ಬೆಂಗಳೂರು: 13,060 ರೂ, ಚೆನ್ನೈ: 13,060 ರೂ, ಮುಂಬೈ: 13,060 ರೂ, ದೆಹಲಿ: 13,075, ಕೋಲ್ಕತಾ: 13,060 ರೂ, ಕೇರಳ: 13,060 ರೂ, ಅಹ್ಮದಾಬಾದ್: 13,065 ರೂ, ಜೈಪುರ್: 13,075, ಲಕ್ನೋ: 13,075, ಭುವನೇಶ್ವರ್: 13,060 ರೂ ಇದೆ.

