ಬೆಂಗಳೂರು: ಇಂದು ತಡ ಮಾಡದೆ ಚಿನ್ನ ಬೆಳ್ಳಿ ಖರೀದಿಗೆ  ತೆರಳಿ ಏಕೆಂದರೆ   ಇಂದು ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ  ಇಳಿಕೆಗೊಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆ ಕಡಿಮೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಮಾತ್ರವೇ ಇಂದು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,520 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,520 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 16ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,640 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 952 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,500 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,640 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 952 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,500 ರೂ
  • ಚೆನ್ನೈ: 67,850 ರೂ
  • ಮುಂಬೈ: 67,500 ರೂ
  • ದೆಹಲಿ: 67,650 ರೂ
  • ಕೋಲ್ಕತಾ: 67,500 ರೂ
  • ಕೇರಳ: 67,500 ರೂ
  • ಅಹ್ಮದಾಬಾದ್: 67,550 ರೂ
  • ಜೈಪುರ್: 67,650 ರೂ
  • ಲಕ್ನೋ: 67,650 ರೂ
  • ಭುವನೇಶ್ವರ್: 67,500 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,540 ರಿಂಗಿಟ್ (63,350 ರುಪಾಯಿ)
  • ದುಬೈ: 2,700 ಡಿರಾಮ್ (61,560 ರುಪಾಯಿ)
  • ಅಮೆರಿಕ: 740 ಡಾಲರ್ (61,440 ರುಪಾಯಿ)
  • ಸಿಂಗಾಪುರ: 1,010 ಸಿಂಗಾಪುರ್ ಡಾಲರ್ (62,710 ರುಪಾಯಿ)
  • ಕತಾರ್: 2,740 ಕತಾರಿ ರಿಯಾಲ್ (62,920 ರೂ)
  • ಸೌದಿ ಅರೇಬಿಯಾ: 2,760 ಸೌದಿ ರಿಯಾಲ್ (61,510 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (63,180 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (59,790 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,520 ರೂ
  • ಚೆನ್ನೈ: 9,970 ರೂ
  • ಮುಂಬೈ: 9,520 ರೂ
  • ದೆಹಲಿ: 9,520 ರೂ
  • ಕೋಲ್ಕತಾ: 9,520 ರೂ
  • ಕೇರಳ: 9,970 ರೂ
  • ಅಹ್ಮದಾಬಾದ್: 9,520 ರೂ
  • ಜೈಪುರ್: 9,520 ರೂ
  • ಲಕ್ನೋ: 9,520 ರೂ
  • ಭುವನೇಶ್ವರ್: 9,970 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.