ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಇಂದು ಏರಿಕೆ ಕಂಡಿದೆ. ನಿನ್ನೆ ಗ್ರಾಮ್​ಗೆ 25 ರೂನಷ್ಟು ಏರಿದ್ದ ಚಿನ್ನದ ಬೆಲೆ ಇಂದು 95 ರೂ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 1 ರೂನಷ್ಟು ಹೆಚ್ಚಾಗಿದೆ. ಈ ವಾರ ಬೆಲೆ ಹೆಚ್ಚಳವೇ ಅಧಿಕ ಆಗಿರುವ ಸಾಧ್ಯತೆ ಇದೆ.

ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 65,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ: 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,650 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,620 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ ಇದೆ. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ: 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,650 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,620 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 800 ರೂ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರಿನಲ್ಲಿ 65,650 ರೂ, ಚೆನ್ನೈನಲ್ಲಿ 65,650 ರೂ, ಮುಂಬೈನಲ್ಲಿ 65,650 ರೂ, ದೆಹಲಿಯಲ್ಲಿ 65,800 ರೂ, ಕೋಲ್ಕತಾದಲ್ಲಿ 65,650 ರೂ, ಕೇರಳದಲ್ಲಿ 65,650 ರೂ, ಅಹ್ಮದಾಬಾದ್ನಲ್ಲಿ 65,700 ರೂ, ಜೈಪುರ್ ನಲ್ಲಿ 65,800 ರೂ, ಲಕ್ನೋದಲ್ಲಿ 65,800 ರೂ, ಭುವನೇಶ್ವರ್ ನಲ್ಲಿ 65,650 ರೂ ಇದೆ.