ಬೆಂಗಳೂರು: ಚಿನ್ನ, ಬೆಳ್ಳಿ ಇತ್ಯಾದಿ ಲೋಹಗಳ ಬೆಲೆಗಳು ಸತತವಾಗಿ ಕಡಿಮೆ ಆಗುತ್ತಿವೆ. ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಹೆಚ್ಚು ವೇಗ ಪಡೆದಿದೆ. ಮಲೇಷ್ಯಾಕ್ಕಿಂತ ಭಾರತದಲ್ಲಿ ಚಿನ್ನ ಈಗ ಹೆಚ್ಚು ಅಗ್ಗ ಇದೆ.

ಇಂದು ಚಿನ್ನದ ಬೆಲೆ ಗ್ರಾಮ್​ಗೆ 90 ರೂನಷ್ಟು ಕಡಿಮೆ ಆದರೆ, ಬೆಳ್ಳಿಯಂತೂ ಗ್ರಾಮ್​ಗೆ 3 ರೂಗೂ ಹೆಚ್ಚು ಮೊತ್ತದಷ್ಟು ಬೆಲೆ ತಗ್ಗಿಸಿಕೊಂಡಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,900 ರೂಪಾಯಿ ಇದೆ.

24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,710 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,250 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,900 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,350 ರೂಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ: 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,900 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 69,710 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 825 ರೂ ಆಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,900 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 69,710 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 63,900 ರೂ, ಚೆನ್ನೈ: 64,000 ರೂ, ಮುಂಬೈ: 63,900 ರೂ, ದೆಹಲಿ: 64,050 ರೂ, ಕೋಲ್ಕತಾ: 63,900 ರೂ, ಕೇರಳ: 63,900 ರೂ, ಅಹ್ಮದಾಬಾದ್: 63,950 ರೂ, ಜೈಪುರ್: 64,050 ರೂ, ಲಕ್ನೋ: 64,050 ರೂ, ಭುವನೇಶ್ವರ್: 63,900 ರೂ ಇದೆ.