ಚಿನ್ನ, ಬೆಳ್ಳಿಯ ಬೆಲೆ ಸತತ ಎರಡನೇ ದಿನವೂ ಕೂಡ ಬೆಲೆ ಇಳಿಕೆಯಾಗಿದೆ. ಕಳೆದ ಕೆಲ ತಿಂಗಳಿಂದ ಗಗನದತ್ತ ಮುಖ ಮಾಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆ ಇದೀಗ ಇಳಿಕೆಯತ್ತ ಸಾಗಿದ್ದು, ಶುಕ್ರವಾರವಷ್ಟೇ ಚಿನ್ನದ ಬೆಲೆ ಕಡಿಮೆಯಾಗಿತ್ತು. ಇದೀಗ ಶನಿವಾರ ಕೂಡ ಇಳಿಕೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 400 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂಗೆ 91,250 ರೂ. ನಷ್ಟಿದೆ. ಬೆಳ್ಳಿ ಬೆಲೆಗಳು ಪ್ರತಿ ಕೆಜಿಗೆ 1,700 ರೂ.ಗಳಷ್ಟು ಇಳಿದು 1,00,300 ರೂ.ಗಳಿಗೆ ತಲುಪಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8, 269ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,021 ಆಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,766 ಆಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ 1,02,900 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 32ರೂ. ಇಳಿಕೆಯನ್ನು ಕಾಣಬಹುದು. ಹಾಗೆ ಬೆಳ್ಳಿ ಬೆಲೆಯಲ್ಲಿಯೂ 2900 ರೂ.ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.

