ಬಿಎಸ್​​ಎನ್​ಎಲ್​, ಜಿಯೋ, ಏರ್​ಟೆಲ್​​ ಪ್ಲಾನ್​ಗಳ ಪೈಪೋಟಿಯ ನಡುವೆ ವೊಡಾಫೋನ್​ ಕಂಪನಿಯು ತನ್ನ ಯೋಜನೆ ಮೂಲಕ ಗಮನ ಸೆಳೆದಿದೆ. ಅತಿ ಕಡಿಮೆ ಬೆಲೆಯ ಮತ್ತು ಹೆಚ್ಚು ಬೆನಿಫಿಟ್ ನೀಡುತ್ತಿದೆ.

ವೊಡಾಫೋನ್​ 154 ರೂಪಾಯಿಯ ಪ್ಲಾನ್​​ ಡೇಟಾ ಯೋಜನೆಯನ್ನು ಮಾತ್ರ ನೀಡುತ್ತಿದೆ. ಕರೆ ಮತ್ತು ಎಸ್​ಎಮ್​ಎಸ್​ ಪ್ರಯೋಜನ ನೀಡುವುದಿಲ್ಲ. ಒಂದು ಬಾರಿ ರೀಚಾರ್ಜ್​ ಮಾಡಿದ್ರೆ ಸಾಕು 14 ಓಟಿಟಿ ಸೇವೆಗಳ ಪ್ರಯೋಜನವನ್ನು ಒದಗಿಸುತ್ತದೆ. ಇದರಿಂದಲೇ ಈ ಪ್ಲಾನ್​ ಹಲವರ ಮನಗೆದ್ದಿದೆ.

ವೊಡಾಫೋನ್​ ಐಡಿಯಾ ಯೋಜನೆಯು ಸಿನಿಮಾ ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ. ಈ ಪ್ಲಾನ್​ ರೀಚಾರ್ಜ್​ ಮಾಡಿದ್ರೆ ಝೀ5, ಸೋನಿಲೈವ್​, ಪ್ಲೇಫಿಕ್ಸ್​, ಫಾನ್​ಕೋಡ್​, ಆಜ್​ ತಕ್​, ಮನೋರಮಾಮ್ಯಾಕ್ಸ್​​ ಸೇರಿದಂತೆ ಕೆಲವು ಓಟಿಟಿಗಳಿಗೆ ಉಚಿತ ಪ್ರವೇಶ ಒದಗಿಸುತ್ತಿದೆ. 2ಜಿಬಿ ಡೇಟಾ ಒದಗಿಸುವ ಈ ಪ್ಲಾನ್​ ಒಂದು ತಿಂಗಳ ಮಾನ್ಯತೆ ಹೊಂದಿದೆ.