ಕಳೆದ ವಾರದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದು, ಸತತ ಮೂರನೇ ವಾರವೂ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 81 ಡಾಲರ್​ ಸಮೀಪದಲ್ಲಿದೆ. ಡಬ್ಲ್ಯುಟಿಐ ಕಚ್ಚಾ ತೈಲ ಕೂಡ 76 ಡಾಲರ್ ಮಟ್ಟಕ್ಕೆ ಕುಸಿದಿದೆ. ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಖರೀದಿದಾರ ಚೀನಾದಲ್ಲಿ ಕಡಿಮೆ ಬೇಡಿಕೆ ಇರುವುದು ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣ.

ಚಂಡೀಗಢ: ಪೆಟ್ರೋಲ್ ಲೀಟರ್‌ಗೆ 94.22 ರೂ. ಮತ್ತು ಡೀಸೆಲ್ ಲೀಟರ್‌ಗೆ 82.38 ರೂ. ಲಕ್ನೋ: ಪೆಟ್ರೋಲ್ ಲೀಟರ್‌ಗೆ 94.63 ರೂ. ಮತ್ತು ಡೀಸೆಲ್ ಲೀಟರ್‌ಗೆ 87.74 ರೂ. ಹೈದರಾಬಾದ್: ಪೆಟ್ರೋಲ್ ಲೀಟರ್‌ಗೆ 107.39 ರೂ. ಮತ್ತು ಡೀಸೆಲ್ ಲೀಟರ್‌ಗೆ 95.63 ರೂ. ಜೈಪುರ: ಪೆಟ್ರೋಲ್ 6 ರೂ. ಪಾಟ್ನಾ: ಲೀಟರ್‌ಗೆ ಪೆಟ್ರೋಲ್ 105.16 ರೂ. ಮತ್ತು ಡೀಸೆಲ್ ಲೀಟರ್‌ಗೆ 92.03 ರೂ.

ಗುರುಗ್ರಾಮ: ಪ್ರತಿ ಲೀಟರ್ ಪೆಟ್ರೋಲ್ 95.18 ರೂ. ಮತ್ತು ಡೀಸೆಲ್ 88.03 ರೂ., ನೋಯ್ಡಾ: ಪ್ರತಿ ಲೀಟರ್ ಪೆಟ್ರೋಲ್ 94.81 ರೂ. ಮತ್ತು ಡೀಸೆಲ್ 87.94 ರೂ. ಇದೆ.

ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 102.86 ಮತ್ತು ಡೀಸೆಲ್ ಲೀಟರ್‌ಗೆ 88.94 ರೂ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.44 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.97 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 91.76 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ. ಇದೆ.