ಬೆಂಗಳೂರು: ಐಫೋನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಫೋನ್ 16 ಸರಣಿಯ ಮೊಬೈಲ್ ಫೋನ್ ಗಳ ಬಿಡುಗಡೆ ದಿನಾಂಕವನ್ನು ಆಪಲ್ ಘೋಷಿಸಿದೆ.
ಆಪಲ್ ಮಾಧ್ಯಮಗಳಿಗೆ ಆಹ್ವಾನ ನೀಡಿದ್ದು ಇದರಲ್ಲಿ 16ರ ಸರಣಿಯ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ್ದು, ಇಟ್ಸ್ ಗ್ಲೋ ಟೈಮ್ ಎಂಬ ಶೀರ್ಷಿಕೆಯಲ್ಲಿ, ಸೆಪ್ಟೆಂಬರ್ 9 ರಂದು ಬೆಳಿಗ್ಗೆ 10ಕ್ಕೆ (ಪೆಸಿಫಿಕ್ ಟೈಮ್) ಆಪಲ್ ಪಾರ್ಕ್ ನ ಸ್ಟೀವ್ ಜಾಬ್ಸ್ ಥಿಯೇಟರ್ ನಲ್ಲಿ ಸ್ಪೆಷಲ್ ಇವೆಂಟ್ ಇರುವುದಾಗಿ ತಿಳಿಸಿದೆ.ಈ ಕಾರ್ಯಕ್ರಮದಲ್ಲಿ ಐಫೋನ್ 16, 16 ಪ್ಲಸ್, 16 ಪ್ರೊ ಮತ್ತು 16 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಈ ಕಾರ್ಯಕ್ರಮವನ್ನು ಸೆ. 9ರಂದು ಬೆಳಿಗ್ಗೆ 10 (ಪೆಸಿಫಿಕ್ ಟೈಮ್) ರಿಂದ (ಭಾರತೀಯ ಕಾಲಮಾನ ಸೆ.9 ರಾತ್ರಿ 9.30 ರಿಂದ) apple.com ನಲ್ಲಿ ವೀಕ್ಷಿಸಬಹುದು ಎಂದು ಆಪಲ್ ತಿಳಿಸಿದೆ.

