ಲಕ್ನೋ: ಒಮ್ಮೆ ರೀಚಾರ್ಜ್ ಮಾಡಿದರೆ ಬರೋಬ್ಬರಿ 100 ಕಿಲೋ ಮೀಟರ್ ಮೈಲೇಜ್ ಕೊಡೋ ಎಲೆಕ್ಟ್ರಿಕ್ ವಾಹನವನ್ನು ಯುವಕನೋರ್ವ ತಯಾರಿಸಿ ಅಚ್ಚರಿ ಮೂಡಿಸಿರುವ ಘಟನೆ ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ಕೃಷ್ಣನಗರ ಗ್ರಾಮದಲ್ಲಿ ನಡೆದಿದೆ.
ಶ್ರೀದಮ್ ಹಲ್ದಾರ್ ಎಂಬ ಯುವಕ ವಿದ್ಯುತ್ ಚಾಲಿತ ವಾಹನ ತಯಾರಿಸಿ ಹಿಸ್ಟ್ರಿ ಕ್ರಿಯೇಟ್ ಮಾಡಿದ್ದಾರೆ. ಬೈಕ್ ಒಂದೇ ಚಾರ್ಜ್‌ನಲ್ಲಿ 100 ಕಿಲೋ ಮೀಟರ್ ಪ್ರಯಾಣಿಸಲಿದೆ. ಎಲೆಕ್ಟ್ರಿಕ್ ಬೈಕಲ್ಲಿ 4 ಬ್ಯಾಟರಿಗಳನ್ನು ಅಳವಡಿಸಲಾಗಿದೆ.
ಇ-ಬೈಕ್ 100 ಕಿಲೋ ಮೀಟರ್ ಮೈಲೇಜ್ ಅಷ್ಟೇ ಅಲ್ಲ, ಗರಿಷ್ಠ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಇದರ ತಯಾರಿಗೆ ಕೇವಲ 60 ಸಾವಿರ ಆಗಿದೆ ಎಂದು ತಿಳಿದು ಬಂದಿದೆ.

