ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ಆಗಸ್ಟ್ 7 ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರದ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 16 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,49,890 ರೂ. ಗೆ ಬಂದು ನಿಂತಿದೆ.

ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 15 ರೂ. ಹೆಚ್ಚಾಗಿದ್ದು, ಹತ್ತು ಗ್ರಾಂಗೆ 1,37,400 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 12 ರೂ. ಏರಿದ್ದು, ಹತ್ತು ಗ್ರಾಂಗೆ 1,12,420 ರೂ. ಗೆ ತಲುಪಿದೆ.

ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,989 (+16) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,740 (+15) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,242 (+12) ರೂ. ಬೆಲೆಗೆ ಬಂದು ನಿಂತಿದೆ.

ಮಂಗಳೂರಿನಲ್ಲಿ ಬೆಳ್ಳಿಯ ಬೆಲೆ ಮೇ 13ರಂದು ಪ್ರತಿ ಕೆಜಿಗೆ 3,30,000ಕ್ಕೆ ಏರಿದ ನಂತರ, ಬಹುತೇಕ ಮೇ ತಿಂಗಳಿಡೀ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ಸ್ಥಿರವಾಗಿತ್ತು. ಆದರೆ ಜೂನ್ನಲ್ಲಿ ಸ್ವಲ್ಪ ಏರಿಳಿತ ಕಂಡುಬಂದು ಪ್ರತಿ ಕೆಜಿಗೆ 2,40,000 ರೂ.ಗೆ ಬಂದು ನಿಂತಿತ್ತು. ಜುಲೈ ಆರಂಭದಲ್ಲಿ ಪ್ರತಿ ಕೆಜಿಗೆ 2,50,000 ರೂ.ವರೆಗೂ ಬೆಲೆ ಏರಿದ ನಂತರ ಇಳಿದಿತ್ತು.

ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಇದೀಗ ಬುಧವಾರ ಪ್ರತಿ ಗ್ರಾಂಗೆ 5 ರೂ. ಏರಿ ಪ್ರತಿ ಕೆಜಿಗೆ 2,40,000 ರೂ.ಗೆ ತಲುಪಿದ್ದು, ಅದೇ ಬೆಲೆಗೆ ಸ್ಥಿರವಾಗಿದೆ.