ಬರ್ಮಿಂಗ್‌ಹ್ಯಾಂ ಸ್ಮಾಲ್‌ ಆರ್ಮ್ಸ್‌ ಕಂಪನಿ ಲಿಮಿಟೆಡ್‌ ಫೇಮಸ್‌ ಆಗಿ ಬಿಎಸ್‌ಎ ಎಂದು ಗುರುತಿಸಿಕೊಂಡಿರುವ ಮೋಟಾರ್‌ಸೈಕಲ್‌ ಬ್ರ್ಯಾಂಡ್‌ ಇದೀಗ . ಬಿಎಸ್‌ಎ ಗೋಲ್ಡ್‌ ಸ್ಟಾರ್‌ 650 ಅನ್ನು ಭಾರತೀಯ ಮಾರುಕಟ್ಟೆಗೆ 2.99 ಲಕ್ಷ ರೂಪಾಯಿ ಎಕ್ಸ್‌ ಶೋ ರೂಮ್‌ ಬೆಲೆಯಲ್ಲಿ ಅನಾವರಣ ಮಾಡಲಾಗಿದೆ. ಈ ಅನಾವರಣದೊಂದಿಗೆ ಬ್ರಿಟನ್‌ನ ಮೋಟಾರ್‌ಸೈಕಲ್‌ ಬ್ರ್ಯಾಂಡ್‌ ತನ್ನ ಆಧುನಿಕ ಮಾದರಿಯ ರೆಟ್ರೋ ಮೋಟಾರ್‌ಸೈಕಲ್‌ ವರ್ಗಕ್ಕೆ ಮರಳಿ ಎಂಟ್ರಿಯಾಗಿದೆ. ಇಡೀ ಬೈಕ್‌ ಭಾರತದಲ್ಲಿಯೇ ಜೋಡಣೆಯಾಗಿದ್ದು, ಐದು ಬಣ್ಣಗಳಲ್ಲಿ ಲಭ್ಯವಿದೆ. ಮೋಟಾರ್‌ಸೈಕಲ್‌ಅನ್ನು ಬಿಡುಗಡೆ ಮಾಡುವ ಸಮಯದಲ್ಲಿ ಮಾತನಾಡಿದ ಮಹೀಂದ್ರಾ & ಮಹೀಂದ್ರಾದ ಅಧ್ಯಕ್ಷ ಆನಂದ್‌ ಮಹೀಂದ್ರಾ, ‘ಬಿಎಸ್‌ಎಯಂತ ಐಕಾನಿಕ್‌ ಬ್ರ್ಯಾಂಡ್‌ಗಳ ಪುನರುಜ್ಜೀವನಗೊಳಿಸುವುದು ನಮ್ಮ ಕೆಲಸವಾಗಿದೆ. ಬಿಎಸ್‌ಎ ಬೈಕ್‌ಗಳ ಸ್ಪಿರಿಟ್‌, ಹೊಸ ಮಾದರಿಯ ಗೋಲ್ಡ್‌ ಸ್ಟಾರ್‌ 650ಯಲ್ಲಿ ಅಚ್ಚಾಗಿದೆ’ ಎಂದು ತಿಳಿಸಿದ್ದಾರೆ.

ಬಿಎಸ್‌ಎ ಗೋಲ್ಡ್‌ ಸ್ಟಾರ್‌ 650 ಬೈಕ್‌ನ ಬೆಲೆಗಳು ಬಣ್ಣಗಳ ಆಧಾರದಲ್ಲಿ ಬದಲಾಗುತ್ತವೆ. ಇನ್‌ಸಿಗ್ನಿಯಾ ರೆಡ್‌ ಮತ್ತು ಹೈಲ್ಯಾಂಡ್‌ ಗ್ರೀನ್‌ ಬಣ್ಣಗಳಲ್ಲಿ ಲಭ್ಯವಿರುವ ಬೈಕ್‌ಗಳಿಗೆ 2.99 ಲಕ್ಷ ರೂಪಾಯಿ ಆಗಿದ್ದರೆ, ಮಿಡ್‌ನೈಟ್‌ ಬ್ಲ್ಯಾಕ್‌ ಮತ್ತು ಡಾನ್‌ ಸಿಲ್ವರ್‌ ವೇರಿಯೆಂಟ್‌ನ ಬೈಕ್‌ಗೆ 3.12 ಲಕ್ಷ ರೂಪಾಯಿ ಆಗಿದೆ. ಶಾಡೋ ಬ್ಲ್ಯಾಕ್‌ ಬಣ್ಣದ ಬೈಕ್‌ಗೆ 3.15 ಲಕ್ಷ ರೂಪಾಯಿ ಆಗಿದೆ. ಈ ಎಲ್ಲವೂ ಎಕ್ಸ್ ಶೋರೂಮ್‌ ಬೆಲೆಗಳಾಗಿವೆ.

ಗೋಲ್ಡ್ ಸ್ಟಾರ್ 650 ರ ವಿನ್ಯಾಸವು ಅದರ ರೆಟ್ರೊ ಸೌಂದರ್ಯವನ್ನು ಪುನರ್‌ನವೀಕರಿಸಿದೆ. ಇದು ಕ್ಲಾಸಿಕ್ ಮೋಟಾರ್‌ಸೈಕಲ್ ಸ್ಟೈಲ್‌ ಉತ್ಸಾಹಿಗಳಿಗೆ ಇದು ಇನ್ನಷ್ಟು ಆಕರ್ಷಕವಾಗುರಲಿದೆ. ಸಂಪೂರ್ಣ ವೃತ್ತಾಕಾರದ ಹೆಡ್‌ಲೈಟ್‌ಗಳು, ನೀರಹನಿಯ ಸ್ಟೈಲ್‌ ಇಂಧನ ಟ್ಯಾಂಕ್‌, ಬಾಗಿದ ಫೆಂಡರ್‌ಗಳು ಎಲ್ಲವೂ ಬೈಕ್‌ಗೆ ವಿಂಟೇಜ್‌ ಲುಕ್‌ ನೀಡಿದೆ.

ಮೋಟಾರ್‌ಸೈಕಲ್ ಅನ್ನು ಕ್ರಾಡೆಲ್‌ ಫ್ರೇಮ್‌ನಲ್ಲಿ ನಿರ್ಮಿಸಲಾಗಿದೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್‌ ಶಾಕ್‌ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಇದು ಟ್ಯೂಬ್ ಮಾದರಿಯ ಟೈರ್‌ಗಳೊಂದಿಗೆ ವೈರ್-ಸ್ಪೋಕ್ ವೀಲ್‌ಗಳನ್ನು ಹೊಂದಿದೆ. ಇದು ಬೈಕ್‌ಗೆ ಟ್ರೇಡಿಷನಲ್‌ ಫೀಲ್‌ ನೀಡುತ್ತದೆ.  ಬ್ರೇಕಿಂಗ್ ವ್ಯವಸ್ಥೆಯು ಮುಂಭಾಗ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಅನ್ನು ಒಳಗೊಂಡಿದೆ, ಡ್ಯುಯಲ್-ಚಾನೆಲ್ ABS ಅನ್ನು ಹೆಚ್ಚಿನ ಸುರಕ್ಷತೆಗಾಗಿ ಅಳವಡಿಸಲಾಗಿದೆ. ಗೋಲ್ಡ್ ಸ್ಟಾರ್ 650ಗೆ ಪವರ್‌ ಎಂಜಿನ್ 652cc, 4-ವಾಲ್ವ್, DOHC, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಯುನಿಟ್ ಆಗಿದೆ. ಈ ಎಂಜಿನ್ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 45 bhp ಮತ್ತು 55 Nm ಟಾರ್ಕ್ ಅನ್ನು ನೀಡುತ್ತದೆ. ಮೋಟಾರ್‌ಸೈಕಲ್ ಗಂಟೆಗೆ 160 ಕಿಲೋಮೀಟರ್‌ ವೇಗ ಸಾಧಿಸುತ್ತದೆ ಎಂದು ಬಿಎಸ್‌ಎ ಹೇಳಿದೆ. ಬೈಕ್‌ನಲ್ಲಿ ಟ್ವಿನ್-ಪಾಡ್ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಚಾರ್ಜರ್ ಅನ್ನು ಅಳವಡಿಸಲಾಗಿದ್ದು, ಅದರ ರೆಟ್ರೊ ವಿನ್ಯಾಸಕ್ಕೆ ಆಧುನಿಕ ಸ್ಪರ್ಶವನ್ನು ನೀಡುತ್ತದೆ.