ಹೊಸದಿಲ್ಲಿ: ಆಹಾರ ವಿತರಣೆ ಮತ್ತು ಕ್ವಿಕ್‌ ಕಾಮರ್ಸ್‌ ಸೇವಾ ಸಂಸ್ಥೆ ಸ್ವಿಗ್ಗಿಯ ಅಲ್ಪ ಪ್ರಮಾಣದ ಷೇರುಗಳನ್ನು ನಟ ಅಮಿತಾಭ್‌ ಬಚ್ಚನ್‌ ಕುಟುಂಬ ತನ್ನದಾಗಿಸಿಕೊಂಡಿದೆ.

ಸ್ವಿಗ್ಗಿ ನೌಕರರು ಮತ್ತು ಆರಂಭಿಕ ಹೂಡಿಕೆದಾರರ ಷೇರುಗಳನ್ನು ಬಿಗ್‌ ಬಿ ಕೊಂಡಿದ್ದಾರೆ.

ಈ ಪ್ರಕ್ರಿಯೆಯಿಂದಾಗಿ ಸ್ವಿಗ್ಗಿ ತನ್ನ ಪ್ರತಿಸ್ಫರ್ಧಿಗಳಾದ ಜೊಮ್ಯಾಟೋ ಮತ್ತು ಜೆಪ್ಟೊಗಳಿಗೆ ಪ್ರಬಲ ಪೈಪೊಟಿ ಒಡ್ಡುವ ಸಾಧ್ಯತೆಗಳಿವೆ. ಐಪಿಒ ಮೂಲಕ ಸ್ವಿಗ್ಗಿ ಮಾರುಕಟ್ಟೆ ಮೌಲ್ಯವನ್ನು 1.25 ಶತಕೋಟಿ ಡಾಲರ್‌ಗಳಿಗೆ ಹಿಗ್ಗಿಸಿಕೊಳ್ಳುವ ಗುರಿ ಹೊಂದಿದೆ. ಇನ್ನು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್‌ ಅಧ್ಯಕ್ಷ ರಾಮ್‌ದೇವ್‌ ಅಗರ್‌ವಾಲ್‌ ಕೂಡ ಸ್ವಿಗ್ಗಿಯಲ್ಲಿ ಸಣ್ಣ ಪಾಲು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.