ಮುಂಬೈ: ಜಾಗತಿಕ ಸಂಘರ್ಷದ ಅನಿಶ್ಚಿತತೆ, ಕಚ್ಛಾತೈಲ ಬೆಲೆ ಏರಿಕೆಯ ನಡುವೆಯೂ ಶುಕ್ರವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 700ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ಆರಂಭಿಕ ವಹಿವಾಟು ಮುಂದುವರಿದಿತ್ತು.
ಸಂವೇದಿ ಸೂಚ್ಯಂಕ 800.61 ಅಂಕಗಳ ಏರಿಕೆಯೊಂದಿಗೆ 77,542.43 ಅಂಕಗಳಲ್ಲಿ ವಹಿವಾಟು ನಡೆದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 247.80 ಅಂಕಗಳ ಜಿಗಿತದೊಂದಿಗೆ 24,210.60 ಅಂಕಗಳ ಮಟ್ಟ ತಲುಪಿತ್ತು.
ಮಧ್ಯಾಹ್ನದ 12ಗಂಟೆ ವಹಿವಾಟಿನ ವೇಳೆ ಷೇರುಪೇಟೆ ಸೂಚ್ಯಂಕ 686.24 ಅಂಕಗಳ ಏರಿಕೆಯೊಂದಿಗೆ 77,428.06 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಎನ್ ಎಸ್ ಇ ನಿಫ್ಟಿ 162 ಅಂಕಗಳ ಜಿಗಿತದೊಂದಿಗೆ 24,124.70 ಅಂಕಗಳ ಗಡಿ ಮುಟ್ಟಿದೆ.
ಇಂದಿನ ವಹಿವಾಟಿನಲ್ಲಿ ಜಿಯೋ ಫೈನಾನ್ಸ್, ಎಚ್ ಡಿಎಫ್ ಸಿ ಲೈಫ್, ಅದಾನಿ ಪೋರ್ಟ್ಸ್, ಇಂಡಿಗೋ, ಜೆಎಸ್ ಡಬ್ಲ್ಯು ಸ್ಟೀಲ್, ಎಸ್ ಬಿಐ ಲೈಫ್, ರಿಲಯನ್ಸ್, ವಿಪ್ರೋ, ಹಿಂಡಲ್ಕೋ, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಆಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಡಾ.ರೆಡ್ಡೀಸ್ ಲ್ಯಾಬ್, ಎಟರ್ನಲ್, ಭಾರ್ತಿ ಏರ್ ಟೆಲ್, ಕೋಲ್ ಇಂಡಿಯಾ, ಐಟಿಸಿ, ಅಪೋಲೊ ಆಸ್ಪತ್ರೆ, ನೆಸ್ಲೆ ಇಂಡಿಯಾ, ಟ್ರೆಂಟ್ ಷೇರುಗಳು ನಷ್ಟ ಕಂಡಿದೆ.

