ಮುಂಬೈ: ದೇಶದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

5000 ಕೋಟಿ ವೆಚ್ಚದಲ್ಲಿ ನಡೆದ ಮದುವೆಯಲ್ಲಿ ದೇಶದ ಹಾಗೂ ವಿಶ್ವದ ದಿಗ್ಗಜರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಅಂಬಾನಿ ಕುಟುಂಬ ದುಬಾರಿ ಉಡುಗೊರೆಗಳನ್ನು ನೀಡಿದೆ. ಕೆಲವರಿಗೆ ಅನಂತ್ ಅಂಬಾನಿ ಕೋಟಿಗಟ್ಟಲೇ ಬೆಲೆ ಬಾಳುವ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವಿವಾಹದಲ್ಲಿ ಭಾಗಿಯಾದ ಸಿನಿಮಾ ತಾರೆಯರಿಗೆ ಅನಂತ್ ಅಂಬಾನಿ ಐಷಾರಾಮಿ ವಾಚ್‌ಗಳನ್ನು ನೀಡಿದ್ದಾರೆ. ವಾಚ್ ಪಡೆದವರಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ ಸೇರಿದ್ದಾರೆ. ಅವರಿಗೆ ಉಡುಗೊರೆಯಾಗಿ ನೀಡಿರುವ ವಾಚ್‌ಗಳು ತಲಾ 2 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಅಂಬಾನಿ ನೀಡಿರುವ ವಾಚ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಂಬಾನಿಯಿಂದ ಉಡುಗೊರೆಯಾಗಿ ಪಡೆದ ವಾಚ್‌ಗಳು Audemars Piguet ಕಂಪನಿಯದ್ದಾಗಿದೆ.