ಮೂಡಬಿದ್ರೆ: ಮೂಡಬಿದ್ರೆಯ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (YIT), ತನ್ನ ಪ್ರತಿಷ್ಠಿತ ಕಾಲೇಜು ದಿನಾಚರಣೆ 2026 ಅನ್ನು ಏಪ್ರಿಲ್ 24, 2026 ರಂದು ಆಯೋಜಿಸಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಏಪ್ರಿಲ್ 24 ಮತ್ತು 25 ರಂದು ಎರಡು ದಿನಗಳ ಕಾಲ ಅತ್ಯಂತ ಸಡಗರದ ‘ಯೆನ್-ಫೆರೆಸ್ಟಾ 2026’ ಸಾಂಸ್ಕೃತಿಕ ಹಬ್ಬವು ನಡೆಯಲಿದೆ. ಈ ಕಾರ್ಯಕ್ರಮಗಳು ಶೈಕ್ಷಣಿಕ ಉತ್ಕೃಷ್ಟತೆ, ವಿದ್ಯಾರ್ಥಿಗಳ ಸಾಧನೆಗಳು ಮತ್ತು YIT ಸಮುದಾಯದ ಸಮಗ್ರ ಸೌಹಾರ್ದತೆಯ ಮನೋಭಾವವನ್ನು ಆಚರಿಸುತ್ತವೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಅಕೋಲೇಡ್ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ನೀರ್ಮಾರ್ಗ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಂತ್ರಿಕ ಪರಿಹಾರಗಳ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಲೇಜು ದಿನಾಚರಣೆಯ ಅಧ್ಯಕ್ಷತೆಯನ್ನು ಯೆನೆಪೋಯ ಸಮೂಹ ಸಂಸ್ಥೆಗಳ ಕಾರ್ಯಾಚರಣೆ ವಿಭಾಗದ ನಿರ್ದೇಶಕರಾದ ಶ್ರೀ ಯೆನೆಪೋಯ ಅಬ್ದುಲ್ಲಾ ಜಾವೇದ್ ಅವರು ವಹಿಸಲಿದ್ದಾರೆ. ವೈಬ್ರೆಂಟ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಮೂಡಬಿದ್ರೆಯ ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿಕ್ಷಣ ತಜ್ಞ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ಅವರನ್ನು ಗೌರವಿಸುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ.

ಈ ಸಮಾರಂಭದಲ್ಲಿ ವಾರ್ಷಿಕ ವರದಿಗಳ ಮಂಡನೆ, ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು YIT ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಲೇಜು ದಿನಾಚರಣೆಯ ನಂತರ, ಅಂತಿಮ ವರ್ಷದ ವಿದ್ಯಾರ್ಥಿಗಳ ಕಾಲೇಜು ಜೀವನದ ಪ್ರಯಾಣ ಮತ್ತು ಸಂಸ್ಥೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಅವರಿಗೆ ಹೃತ್ಪೂರ್ವಕ ವಿದಾಯ ಸಮಾರಂಭವನ್ನು ಆಯೋಜಿಸಲಾಗುವುದು.

ಯೆನ್-ಫೆರೆಸ್ಟಾ 2026 – ಯುವಶಕ್ತಿ ಮತ್ತು ಉತ್ಸಾಹದ ಹಬ್ಬ

ಔಪಚಾರಿಕ ಕಾರ್ಯಕ್ರಮಗಳ ನಂತರ ಸಂಭ್ರಮದ ಸಾಂಸ್ಕೃತಿಕ ಹಬ್ಬ ‘ಯೆನ್-ಫೆರೆಸ್ಟಾ 2026’ ಆರಂಭವಾಗಲಿದ್ದು, ಏಪ್ರಿಲ್ 24 ಮತ್ತು 25 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ನೃತ್ಯ ಸ್ಪರ್ಧೆಗಳು, ಸುಂದರ ಸಂಗೀತ ಪ್ರದರ್ಶನಗಳು, ಗಾಯನ ಸ್ಪರ್ಧೆಗಳು ಮತ್ತು ಆಕರ್ಷಕ ರಾಂಪ್ ವಾಕ್ ಸೇರಿದಂತೆ ಹತ್ತಾರು ಪ್ರತಿಭೆಗಳ ಅನಾವರಣ ಇಲ್ಲಿ ಆಗಲಿದೆ. ಈ ಸಮಾರಂಭವು YIT ಯ ಒಗ್ಗಟ್ಟಿನ ಸಾಂಸ್ಕೃತಿಕ ಮನೋಭಾವವನ್ನು ಎತ್ತಿ ತೋರಿಸಲಿದೆ. ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ಪ್ರಾಧ್ಯಾಪಕರಾದ ಪ್ರೊ. ಅಬ್ದುಲ್ ರಹಿಮಾನ್ ಅವರು ಯೆನ್-ಫೆರೆಸ್ಟಾ 2026 ರ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.