ಬಂಟ್ವಾಳ: ಯಕ್ಷಗಾನ ದಿಗ್ಗಜ ಕುರಿಯ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ವಿಧಿವಶರಾಗಿದ್ದಾರೆ. ವಿಠಲ ಶಾಸ್ತ್ರೀ ಮನೆತನದವರಾಗಿದ್ದ ಯಕ್ಷಗಾನ ಸಂಘಟಕ ಕಲಾಪೋಷಕ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ( 65) ಇಂದು ಅಗಲಿದ್ದಾರೆ.

ಅಗಸ್ಟ್ 21ರ ಇಂದು ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ.ಯಕ್ಷಗಾನ ದಿಗ್ಗಜ ‌ಗೋಪಾಲಕೃಷ್ಣ ಶಾಸ್ತ್ರೀ ಅವರು ಪುತ್ರ, ಪುತ್ರಿ ಇದ್ದಾರೆ. ಕುರಿಯ ಹವ್ಯಕ ಘಟಕದ ಗುರಿಕ್ಕಾರರಾಗಿ, ಸ್ವರ್ಣ ಭಿಕ್ಷಾ ಉತ್ಸವದ ಗೌರವಾಧ್ಯಕ್ಷರಾಗಿ,‌ಕೋಳ್ಯೂರ ಹವ್ಯಕ ವಲಯ ಅಧ್ಯಕ್ಷರಾಗಿಹತ್ತು ಹಲವು ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು.