ಮಂಗಳೂರು: ಜಿಲ್ಲೆಯಲ್ಲಿ ಕೆಲ ತಿಂಗಳಿನಿಂದ ಕೆಂಪು ಕಲ್ಲು, ಮರಳು ಬಂದ್ ಹಿನ್ನಲೆ ಜಿಲ್ಲೆಯ ಕಾರ್ಮಿಕರ ಜೀವನ ಸಂಕಷ್ಟದಲ್ಲಿದೆ. ಈ ಉದ್ಯಮ ನಂಬಿರುವ ಅನೇಕ ಬಾಳು ಕಂಗಾಲಾಗಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಕಾರ್ಮಿಕರ ಮಕ್ಕಳ ಶಾಲಾ ಕಾಲೇಜು ಪೀಸ್ ನೀಡಲು ಆಗಾದ ಪರಿಸ್ಥಿತಿಯಲ್ಲಿ ಜನ್ರಿದ್ದರೆ. ಕಾರ್ಮಿಕರ ಜೀವನ ದಿಕ್ಕಾ ಪಾಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೇಸ್ ಅಧಿಕಾರ ವೇಳೆ ಜಿಲ್ಲೆಗೆ ಮರಳು ನೀತಿ ಮಾಡುವ ಭರವಸೆ ನೀಡಿತ್ತು.
ಆದ್ರೆ ಇದೀಗಾ ಇದನ್ನು ಸಂಪೂರ್ಣ ಬಂದ್ ಮಾಡಿ ಜನ್ರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಬಂದ್ ಆಗಿದೆ ಇದಕ್ಕೆ ನಮ್ಮ ಬೆಂಬಲ ಇದೆ. ಅಕ್ರಮಗಳು ಜಿಲ್ಲೆಯಲ್ಲಿ ಆಗದಂತೆ ಇಲಾಖೆ ಕೈಗೊಂಡ ಕ್ರಮ ಶ್ಲಾಘನೀಯ.
ಆದ್ರೆ ಸಕ್ರಮವಾಗಿ ಜನ್ರಿಗೆ ವ್ಯವಸ್ಥೆ ಕಲ್ಪಿಸಿಬೇಕಿದೆ. ಪಕ್ಕದ ಕೇರಳದ ಮಾದರಿ ರಾಯಲ್ಟಿ ವಿಧಿಸಲಿ ಇಲ್ಲಿ ವಿಧಿಸಿರುವ ರಾಯಲ್ಟಿ ದುಪ್ಪಟ್ಟಾಗಿದೆ. ಇದರ ವಿರುದ್ದ ಜುಲೈ ೧೪ ರಂದು ಬಿಜೆಪಿ ಪ್ರತಿಭಟನೆ ಮಾಡಲಿದೆ. ಕರ್ನಾಟಕ ಸರ್ಕಾರದ ಈ ನೀತಿ ವಿರುದ್ದ ಕಾರ್ಮಿಕರೊಂದಿಗೆ ಬಿಜೆಪಿ ಇದೆ. ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಲಿಯಲಿದೆ ಎಂದರು.

