ಮಂಗಳೂರು : ಶ್ರಮಜೀವಿ ಕಾರ್ಮಿಕರ ಪರಿಶ್ರಮದಿಂದ ಜಗತ್ತು ಬೆಳೆದು ನಿಂತಿದೆ ಕಾರ್ಮಿಕರಿಲ್ಲದೆ ಸಮಾಜದ ಚಕ್ರ ತಿರುಗದು ಎಂದು ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು.
ಅವರು ಇಂದು ನಗರದ ಹಳೆಬಂದರು ಕಾರ್ಮಿಕರ ಕಟ್ಟೆ ಬಳಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ನಡೆದ ಮೇ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. ಸರಕಾರಗಳು ಕಾಪೋರೇಟ್ ಕಂಪೆನಿಗಳ ಅಡಿಯಾಳಾಗಿ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಕಾರ್ಮಿಕರ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದ ಅವರು ಕಾರ್ಮಿಕರು ಐಕ್ಯತೆಯಿಂದ ಹೋರಾಟ ನಡೆಸದಿದ್ದರೆ ಕಾರ್ಮಿಕರ ಹಕ್ಕು ಪ್ರಾಪ್ತಿಯಾಗದು ಎಂದು ಅವರು ನುಡಿದರು.
ಸಂಘದ ಹಿರಿಯ ಸದಸ್ಯರಾದ ಮಜೀದ್ ಉಳ್ಳಾಳಬೈಲ್ ಧ್ವಜಾರೋಹಣ ನಡೆಸಿದರು. ಬಂದರು ಶ್ರಮಿಕರ ಸಂಘದ ಪ್ರಮುಖರಾದ ಮೋಹನ್ ಕುಂಪಲ, ಸಿದ್ದಿಕ್ ಬೆಂಗ್ರೆ,ಶಮೀರ್ ಬೋಳಿಯಾರ್,ಲೋಕೇಶ್ ಶೆಟ್ಟಿ, ಹರೀಶ್ ಕೆರೆಬೈಲ್, ರಫೀಕ್, ಅಬ್ಬಾಸ್ ಎಂ ಆರ್, ಎಂ. ಡಿ ಜಾಸಿಂ, ಮೊದಲಾದವರು ಉಪಸ್ಥಿತರಿದ್ದರು.

