ಮಂಗಳೂರು: ಕೊರಗಜ್ಜ ಕ್ಷೇತ್ರದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ. ಕೊರಗಜ್ಜನ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಸನ್ನಿಧಾನಕ್ಕೆ ನಡೆ ಇದೆ. ಅಲ್ಲಿಗೆ ಧಾರ್ಮಿಕ ಶ್ರದ್ದೆಯಿಂದ ಅಲ್ಲಿಗೆ ಜನರು ಬರ್ತಾರೆ. ಆದರೆ ಇದನ್ನೇ ಬಳಸಿ ಕೆಲವರು ಲಾಭ ಪಡೆದುಕೊಳ್ತಾರೆ. ಆದರೆ ಜನರು ಅದನ್ನ ಯಾರೂ ಗಮನಕ್ಕೆ ತೆಗೋಲೋದಿಲ್ಲ ಎಂದರು.

ಅವರು ಬಂದದ್ದು, ಹೋದದ್ದು ಮತ್ತು ಮಾತನಾಡಿದ್ದು ಗೊತ್ತೇ ಆಗದಂತೆ ಇರಬೇಕು. ಮಾತನಾಡಲು ಬರೋವನು ಅಂಥ ನೂರು ಕೇಸ್ ಹಾಕಿದ್ರು ಮಾತನಾಡ್ತಾನೆ. ಹಾಗಾಗಿ ಅಂಥವರನ್ನು ನಾವು ಗಣನೆಗೆ ತೆಗೆದುಕೊಳ್ಳಬಾರದು. ಆನೆ ಹೋಗುವಾಗ ನಾಯಿಗಳು ಬೊಗಳ್ತವೆ ಅಂತ ಗಮನ ಹರಿಸೋಕೆ ಆಗುತ್ತಾ? ಎಂದರು.

ಕೋಮುವಾದಿ ಶಕ್ತಿಗಳನ್ನು ದೋಷಿಸೋದು ಜಾತ್ಯಾತೀತತೆ ಅಲ್ಲ, ಅಂಥ ಸಮಯದಲ್ಲಿ ಸಮಾಜವನ್ನು ಒಗ್ಗಟ್ಟು ಮಾಡಿ ಸಮಾಜ ಕಟ್ಟೋದು ಜಾತ್ಯಾತೀತತೆ. ಅವರು ಬೈದಾಗ ನಾವು ಮತ್ತೆ ಬೈಯ್ಯೋದಲ್ಲ, ನಾವು ಸಮಾಜ ಕಟ್ಟಬೇಕು ಎಂದರು.