ಮಂಗಳೂರು: ಸ್ಟಿಂಗ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಈಗಿನ ಶಾಸಕರೂ ಅದೇ ರೀತಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆಯೇ?. ಸ್ಟಿಂಗ್ ಪ್ರಕರಣ ಸಮಗ್ರ ತನಿಖೆ ನಡೆದು, ಸತ್ಯಾಸತ್ಯಗೆ ಜನತೆಗೆ ತಿಳಿಯಬೇಕು. ರಾಜ್ಯದಲ್ಲಿ ನಡೆದಿರುವ ಸ್ಟಿಂಗ್ ಪ್ರಕರಣದಲ್ಲಿ ಪುತ್ತೂರಿನ ಹೆಸರು ಉಲ್ಲೇಖಗೊಂಡಿದೆ. ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿಕೆ ನೀಡಿದ್ದಾರೆ.
ಸ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೇ ಇದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಈ ಸ್ಟಿಂಗ್ ನಡೆದಿದೆ’. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆ ನಡೆದು, ಸತ್ಯಾಸತ್ಯಗೆ ಜನತೆಗೆ ತಿಳಿಯಬೇಕು. ಈ ವಿಚಾರದಲ್ಲಿ ಎಂಬ ಬಗ್ಗೆ ಸಂದೇಹ ಉಂಟಾಗಿದೆ. ಪ್ರಕರಣ ೨೦೧೧ರಲ್ಲಿ ನಡೆದಿದ್ದರೂ, ೨೦೨೩ರ ಚುನಾವಣೆ ಸಂದರ್ಭದಲ್ಲಿ ಟಿಕೆಟ್ಗಾಗಿ ಈ ಪ್ರಕರಣವನ್ನು ಬಳಸಲಾಗಿದೆ ಎಂದು ಹೇಳಲಾಗಿದೆ.
ಈ ಪ್ರಕರಣವನ್ನು ದಾಳವಾಗಿ ಬಳಸಿ ಚುನಾವಣೆಯಲ್ಲಿ ಯಾರ್ಯಾರು ಟಿಕೆಟ್ ಪಡೆದುಕೊಂಡಿದ್ದಾರೆ?. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ? ಯಾರ್ಯಾರ ಸ್ಟಿಂಗ್ ಆಗಿದೆ ಎಂಬ ಕುರಿತು ಸಮಗ್ರ ತನಿಖೆ ನಡೆಯಬೇಕು. ತಂದೆಯ ಹೆಸರನ್ನು ಕೆಡಿಸಲು ಈ ಸ್ಟಿಂಗ್ ನಡೆಸಲಾಗಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇದರಲ್ಲಿ ಪುತ್ತೂರಿನ ಹೆಸರು ಇರುವುದು ಜಿಲ್ಲೆಗೆ ಕೆಟ್ಟ ಹೆಸರು ತಂದಿದೆ. ಬೇರೆ ಕಡೆಗಳಲ್ಲೂ ಈ ರೀತಿಯ ಸ್ಟಿಂಗ್ ನಡೆದಿರುವ ಅನುಮಾನವಿದೆ. ಈ ಬಗ್ಗೆ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು, ಶೀಘ್ರದಲ್ಲಿ ಸತ್ಯಸತ್ಯತೆ ತಿಳಿಯಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.

