ಮಂಗಳೂರು : ಮತಾಂತರ ನಿಷೇಧ ಕಾಯಿದೆ ರದ್ದು ಮಾಡಿದರೆ ಅದು ಮುಸ್ಲಿಮರ ಓಲೈಕೆಯಾದಂತೆ ಎಂದು ಆರೋಪಿಸಿದ್ದು, ಪ್ರಪಂಚದಲ್ಲಿ ಮುಸ್ಲಿಮರು ನಂಬರ್ ಒನ್ ಆಗುತ್ತಾರೆ ಎಂಬ ವರದಿ ಬಂದಿದೆ ಎಂದು ಹೇಳಿಕೆ ನೀಡಿದ್ದು, ಲವ್ ಜಿಹಾದ್ ಮೂಲಕವೇ ಇದೆಲ್ಲಾ ನಡೆಯುತ್ತಿದೆ ಎಂದು ಆರ್. ಅಶೋಕ್ ಆರೋಪ ಮಾಡಿದ್ದಾರೆ.

ಇದೇ ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿ ಎಂದು ಆರ್. ಅಶೋಕ್ ಕಳವಳ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಮತಾಂತರ ನಿಷೇಧ ಕಾಯಿದೆ ವಾಪಸ್ ಪಡೆಯಲು ಬಿಡುವುದಿಲ್ಲ. ಕಾಯಿದೆ ರದ್ದತಿ ವಿರುದ್ಧ ಹೋರಾಟ ಮಾಡುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.