ಮಂಗಳೂರು: ರಾಜ್ಯಾದ್ಯಂತ ಸರ್ಕಾರದ ಗಣತಿ ಕಾರ್ಯ ಆಗ್ತಾ ಇದೆ. ಗಣತಿ‌ ಕಾರ್ಯಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಮಾಡ್ಲಿಲ್ಲ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಹೇಳಿಕೆ ನೀಡಿದರು.

ಮಂಗಳೂರು ಶಿಕ್ಷಣ ಕಾಶಿಯಲ್ಲಿ ಅವೈಜ್ಞಾನಿಕ ರೀತಿ ಮಾಡಿದ್ದಾರೆ. ಇಲ್ಲಿನ ಅಧಿಕಾರಿಗಳ ಕೈಗೊಂಡ ಕ್ರಮ ಮತ್ತು ರೀತಿಯಿಂದ ಅವೈಜ್ಞಾನಿಕ ಆಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.  ಆದ್ರೆ ಇದ್ರ ಬಗ್ಗೆ ಏನು ಕ್ರಮ ಆಗಿಲ್ಲ.

೧೨ ತಾರೀಕಿಗೆ ಗಣತಿ ಕೊನೆಯಾಗಲಿದೆ. ೨೨ ರಿಂದ ಸಮೀಕ್ಷೆ ಆರಂಭ ಆಗಿದೆ ಆದ್ರೆ ಮಂಗಳೂರಿನಲ್ಲಿ ಮೇಲ್ವಿಚಕರನ್ನು ೨೭ ಕ್ಕೆ ಆಯ್ಕೆ ಮಾಡ್ತೀರಿ. ಇದು ಯಾವ ನಿಯಮ ಮೇಲ್ವಿಚರಕರಣ ಆಯ್ಕೆ ೭ ದಿನಗಳ ಮೊದಲು ಮಾಡಬೇಕಿತ್ತು. ಎಲ್ಲಾ ಹಬ್ಬವನ್ನು ಬಿಟ್ಟು ಶಿಕ್ಷಕರು ಕೆಲಸ ಮಾಡಿದ್ದಾರೆ. ಇನ್ನೂ ಗಣತಿ ಮುಗಿತಿಲ್ಲ ಮುಂದೇ ಶಾಲಾ ಆರಂಭ ಅಗಲಿದೆ.

ಆಗ ಶಿಕ್ಷಕರು ನಿಮ್ಮ ಗಣತಿ ಹಿಂದೆ ಹೋಗಬೆಕಾ ಶಾಲೆಗೆ ಹೋಗಬೇಕಾ. ಪ್ರೌಢಶಾಲಾ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಬಾರದು ಎಂದು ಪ್ರಿನ್ಸಿಪಾಲ್ ಸೆಕ್ರಟರಿ ಆದೇಶ ಇದೆ. ಆದ್ರೆ ಅದನ್ನು ಗಾಳಿಗೆ ತೂರಿ ಅವರನ್ನು ಆಯ್ಕೆ ಮಾಡಿದ್ದೀರಿ. ಎಡಿಸಿ ರಾಜು ಅವರಿಂದ ಸಂಪೂರ್ಣ ಅನಾಹುತ ಆಗಿದೆ.

ಎಲ್ಲೂ ವೈಫಲ್ಯ ಆಗದ ಗಣತಿ ಮಂಗಳೂರಿನಲ್ಲಿ ಆಗಿದೆ. ಇಲ್ಲಿ ಎಡಿಸಿ ಅವರ ವೈಫಲ್ಯ ಶಿಕ್ಷಕರ ಮೇಲೆ ಹಾಕಿದ್ದಾರೆ. ರಾಜ್ಯದ ಬೇರೆ ಎಲ್ಲೂ ಈತರ ಗೊಂದಲ ಆಗಿಲ್ಲ. ಶಿಕ್ಷಕರನ್ನು ಮೂಡಬಿದ್ರೆಯಿಂದ ಮಂಗಳೂರಿಗೆ ಗಣತಿ ಹಾಕಿದ್ದೀರಿ. ಹೇಗೆ ಶಿಕ್ಷಕರು ಹೋಗೋದು. ಇನ್ನೂ ಎರಡು ದಿನದಲ್ಲಿ ಯಾವ ರೀತಿ ಮುಗಿಸೋದು. ಈ ಬಗ್ಗೆ ಅಧಿಕಾರಿಗಳು ಒಂದು ಸಭೆ ಮಾಡಿಲ್ಲ.

ಅನಾರೋಗ್ಯ ಪೀಡಿತ ಶಿಕ್ಷಕರಿದ್ದಾರೆ ಅವರನ್ನು ಗಣತಿ‌ಕಾರ್ಯಕ್ಕೆ ಹಾಕಿದ್ದಾರೆ. ೨೭ ರಂದು ೧೫೦೦ ಜನ್ರಿಗೆ ಒಂದೇ ದಿನ ಟ್ರೈನಿಂಗ್ ಮಾಡಿದ್ರು. ೧೨೮ ಮನೆ ನೀಡಿದ್ದಾರೆ ಒಂದು ಮನೆಗೆ ೪೫ ನಿಮಿಷ ಕಾಲ ಬೇಕು. ೫ ಲಕ್ಷ ೮೦ ಸಾವಿರ ಮನೆಗಳಿವೆ ಈ ಪೈಕಿ ೩.೫೦ ಲಕ್ಷ ಮನೆಗಳ ಗಣತಿ ಆಗಿದೆ. ಇನ್ನು ೨.೩೦ ಲಕ್ಷ ಮನೆಗಳು ಉಳಿದಿದೆ. ವಾಸ್ತವಿಕ ಸ್ಥಿತಿಯನ್ನು ಅರ್ಥಮಾಡದೆ ಇಲ್ಲಿನ ಜಿಲ್ಲಾಧಿಕಾರಿ ಇದ್ರ ಜವಾಬ್ದಾರಿಯನ್ನು ಎಡಿಸಿಗೆ ಕೊಟ್ಟಿದ್ದಾರೆ.

ಪೂರ್ವಭಾವಿ ಸಭೆ ಮಾಡದೆ ಅವೈಜ್ಞಾನಿಕ ಗಣತಿ ಆರಂಭಿಸಿದ್ದಾರೆ. ೧೦೦ ಶಿಕ್ಷಕರನ್ನು ಸಸ್ಪೆಂಡ್ ಮಾಡಿದ್ದೀರಿ ಬಿಇಒಗಳನ್ನು ರಜೆಯಲ್ಲಿ ಕಳಿಸಿದ್ದೀರಿ. ಶಿಕ್ಷಕರನ್ನು ಗುಲಾಮರಂತೆ ನಡೆಸಿದ್ದೀರಿ. ಸರ್ಕಾರ ಅವರ ನ್ಯೂನತೆ ನೋಡಿದ್ರೆ ಎಡಿಸಿಯನ್ನು ಅಮಾನತು ಮಾಡಬೇಕು. ೧೪೫೩ ಶಿಕ್ಷಕರು ಇದ್ದಾರೆ ೧೪೨೧ ಶಿಕ್ಷಕರನ್ನು ಬಳಸಿದ್ದೀರಿ. ಬಂಟ್ವಾಳದಲ್ಲಿ ೧೦೮೪ ಶಿಕ್ಷಕರ ಪೈಕಿ ೮೩೦ ಮಂದಿ ಗಣತಿ ಆಯ್ಕೆ ೭೦ ಮಂದಿ ಮೇಲ್ವಿಚಾರಕರನ್ನು ಮಾಡಿದ್ದಿರಿ.

ಈ ಶಿಕ್ಷಕರ ಗಣತಿ ವೇಳೆ ಬೇರೆ ಯಾವ ಇಲಾಖೆ ಅಧಿಕಾರಿಗಳು ನೇಮಕ ಆಗಿದೆ. ಜಿಲ್ಲಾಧಿಕಾರಿಗಳೇ ಅಮಾನವೀಯವಾಗಿ ನಡೆಸಿದ್ದೀರಿ. ಇನ್ನಾದರೂ ಬೆರೆ ಇಲಾಖೆ ಅಧಿಕಾರಿಗಳನ್ನು‌ ಬಳಸಿ ಶಿಕ್ಷಕರು ಈ ಅವರೊಂದಿಗೆ ಸೇರಿ ಗಣತಿ ಮುಗಿಸ್ತಾರೆ. ಎಡಿಸಿ ಎಷ್ಟು ದಿನ ಪೀಲ್ಡ್ ಗೆ ಹೋಗಿದ್ದಾರೆ..? ಎಷ್ಟು ತಾಲೂಕಿಗೆ ಎಡಿಸಿ ಹೋಗಿದ್ದಾರೆ. ಆಫೀನಲ್ಲಿ ಕೂತು ಹೇಳಿದ್ರೆ ಗಣತಿ ಆಗಲ್ಲ ಫಿಲ್ಡ್ ಗೆ ಹೋಗಬೇಕು. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಗೆ ಮನವಿ ಮಾಡಿದ್ದೇನೆ. ಈ‌ಬಗ್ಗೆ ಕ್ರಮಕ್ಕೆ ಸೂಚನೆ ಕೋರಿದ್ದೇನೆ.

೩ ಬಿಇಒ ಕಡ್ಡಾಯ ರಜೆ ಬೆಂಗಳೂರಿ ಸೇರಿದಂತೆ ಜಿಲ್ಲೆಯಲ್ಲಿ ಯಾರನ್ನು ಸಸ್ಪೆಂಡ್ ಮಾಡಿಲ್ಲ ಎಂದು ಅಧಿಕಾರಿಗಳು ಹೇಳ್ತಾರೆ. ಆದ್ರೆ ಈಗಾಲೆ  ೨೫ ಮಂದಿಗೆ ನೋಟಿಸ್ ನೀಡಿದ್ದಾರೆ.  ಉಡುಪಿಯಲ್ಲಿ ೮ ಮಂದಿಗೆ ಸಸ್ಪೆಂಡ್ ಮಾಡಿದ್ದಾರೆ. ಅ.೭ ಗಣತಿ ಮುಗಿಸಲು ಹೇಳಿದ್ರೆ ಪರಿಪೂರ್ಣ ಸಮೀಕ್ಷೆ ಆಗಲ್ಲ. ರಾಜ್ಯದಲ್ಲಿ ೧೨ ರವೆರೆಗೆ ಸಮೀಕ್ಷೆ ಇದೆ.

ಆದಕ್ಕೆ ಮಂಗಳೂರಿನಲ್ಲಿ ೧೨ ವರೆಗೆ ರಜೆ ನೀಡಲು ಮನವಿ. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಂಡಿ ಬಾಗಿಲು ಹಾಕಿದ್ರು ಅಂದ ಹಾಗೆ, ಶಿಕ್ಷಣ ಸಚಿವರು ಎಲ್ಲ ಸಮಸ್ಯೆ ಆದ ಮೇಲೆ ಮಂಗಳೂರಿಗೆ ಬಂದು ಸಭೆ ಮಾಡ್ತಾರೆ. ಕಳೆದ ಮೂರು ತಿಂಗಳಿನಿಂದ ಸರ್ಕಾರ ಅತಿಥಿ ಶಿಕ್ಷಕರ ಸಂಬಳ ನೀಡಿಲ್ಲ. ಅವ್ರ ಮೂರು ತಿಂಗಳ ಸಂಬಳ ಹಾಕಿದ್ರೆ ಅವ್ರು ಮಾಡ್ತಾರೆ ಗಣತಿ. ಸರಿಯಾದ ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಕ್ರಮ ಜಿಲ್ಲಾಧಿಕಾರಿಗೆ ಮನವಿ ಮಾಡ್ತೇನೆ. ಇಲ್ಲಂದ್ರೆ ಇದೀಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡ್ತೇನೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಹೇಳಿಕೆ ನೀಡಿದರು.