ಮಂಗಳೂರು : ಕಾಗ್ರೆಸ್ ಪಕ್ಷದ ಸೈದ್ಧಾಂತಿಕ ನಿಲುವನ್ನು ಒಪ್ಪಿಕೊಂಡವರು ನಾವು, ಮತೀಯವಾದಿ ಸಂಘಟನೆ ಆರೆಸ್ಸೆಸ್ ಚಟುವಟಿಕೆ ವಿರೋಧಿಸುತ್ತ ಬಂದಿದ್ದೇವೆ. ರಾಹುಲ್ ಗಾಂಧಿಯವರು ಆರೆಸ್ಸೆಸ್ ಗೆ ಹೆದರುವವರು ನಮ್ಮ ಪಕ್ಷದಲ್ಲಿ ಇರುವುದು ಬೇಡವೆಂದು ಈಗಾಗಲೇ ಹೇಳಿದ್ದಾರೆ.
ಸಮಾಜದಲ್ಲಿ ನಮ್ಮ ನಿಲುವನ್ನು ಹೇಳುವುದರಲ್ಲಿ ಗಟ್ಟಿತನ ಇರಬೇಕು. ಆರೆಸ್ಸೆಸ್ ಅನ್ನು ಎರಡು ಬಾರಿ ಸರ್ದಾರ್ ವಲ್ಲಭಭಾಯಿ ಪಟೇಲರು ನಿಷೇಧ ಮಾಡಿದ್ದರು. ಬಿಜೆಪಿಯವರು ಪಟೇಲರು ಮಾಡಿದ ತೀರ್ಮಾನವನ್ನು ಒಪ್ಪಿಕೊಳ್ಳುತ್ತಾರೆಯೇ? ಇವರು ಪಟೇಲರ ಮೂರ್ತಿ ಮಾಡಿದ್ದು ಬಿಟ್ಟರೆ ಅವರ ನೀತಿಯನ್ನು ಅನುಸರಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಪ್ರಿಯಾಂಕ ಖರ್ಗೆಯವರನ್ನು ಹೆದರಿಸುವಂತಹ ಕೆಲಸ ಆಗುತ್ತಿದ್ದು ಖಂಡಿಸುತ್ತೇವೆ, ಮುಖ್ಯಮಂತ್ರಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ, ತಿಳುವಳಿಕೆ ಕೊರತೆ ಇದೆ, ಪೂರ್ವಜರ ಬಗ್ಗೆ ತಿಳಿದುಕೊಳ್ಳಿ, ಬಿಜೆಪಿ ಮಾಡೋದು ಎಲ್ಲ ಓಟಿಗಾಗಿ, ಧರ್ಮ, ದೇವರು ದೇಶಪ್ರೇಮ ಕಿಂಚಿತ್ ಇಲ್ಲ, ಎಂದು ರಮಾನಾಥ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

