ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಪೊಲೀಸ್ ವಶ ವಿಚಾರವಾಗಿ ಕದ್ರಿ ಪೊಲೀಸ್ ಠಾಣೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಗರಂ ಆಗಿದ್ದಾರೆ.
ಕದ್ರಿ ಪೊಲೀಸ್ ಅಧಿಕಾರಿಗಳನ್ನ ಶಾಸಕ ಕಾಮತ್ ಹಿಗ್ಗಾ ಮುಗ್ಗಾ ಜಾಡಿಸಿದರು. ಪೊಲೀಸ್ ಠಾಣೆಯಲ್ಲಿ ಶಾಸಕ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು. ಶರಣ್ ಪಂಪ್ ವೆಲ್ ವಶಕ್ಕೆ ಪಡೆದ ಬಗ್ಗೆ ಸರಿಯಾದ ಮಾಹಿತಿಯನ್ನು ಕದ್ರಿ ಪೊಲೀಸ್ ನೀಡಲಿಲ್ಲ.
ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕಾದು ಕಾದು ಶಾಸಕ ಸುಸ್ತಾದರು. ಪ್ರಕರಣದ ಕುರಿತು ಇನ್ಸ್ಪೆಕ್ಟರ್ ಬಳಿ ಮಾಹಿತಿ ಪಡೆಯಲು ಶಾಸಕ ಬಂದಿದ್ದರು. ಈ ವೇಳೆ ಶಾಸಕರಿಗೆ ಸೂಕ್ತ ಸ್ಪಂದನೆ ನೀಡದ ಆರೋಪ ಕೇಳಿಬಂದಿದೆ. ಇದರಿಂದ ಶಾಸಕ ವೇದವ್ಯಾಸ್ ಕಾಮತ್ ಗರಂ ಆದರು. ಆಕ್ರೋಶದಿಂದ ಠಾಣೆಯಿಂದ ಹೊರನಡೆದು ಪೊಲೀಸ್ ಕಮಿಷನರ್ ಬಳಿ ಶಾಸಕ ತೆರಳಿದರು.

