ಮಂಗಳೂರು : ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ಉಪರಾಷ್ಟ್ರಪತಿ ಪಿ ರಾಧಾಕೃಷ್ಣನ್ ಪಡೆದರು. ಮಂಜುನಾಥನಿಗೆ ವಿಶೇಷ ಪೂಜೆಯನ್ನು ಉಪ ರಾಷ್ಟ್ರಪತಿ ಪಿ ರಾಧಾಕೃಷ್ಣನ್ ಸಲ್ಲಿಸಿದರು.
ದೇವರ ದರ್ಶನದ ವೇಳೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು. ಸಾಂಪ್ರದಾಯಿಕ ಉಡುಪಿನಲ್ಲಿ ಉಪರಾಷ್ಟ್ರಪತಿಗಳು ದೇವಾಲಯ ಪ್ರವೇಶಿಸಿದರು. ಬಳಿಕ ಕ್ಷೇತ್ರದ ಅನ್ನಪೂರ್ಣ ಛತ್ರಕ್ಕೆ ಉಪರಾಷ್ಟ್ರಪತಿಗಳು ಭೇಟಿ ಮಾಡಿದರು.
ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕೆಲ ಕಾಲ ಚರ್ಚೆ ಮಾಡಿದರು. ಉಪರಾಷ್ಟ್ರಪತಿಗಳಿಂದ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸೇವಾ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.

