ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಪಕ್ಷಕ್ಕಿಂತ ದೇಶ ದೊಡ್ಡದು. ಅಧ್ಯಕ್ಷ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಕೆಲವೊಂದು ಸುಧಾರಣೆ ತರಲು ಸಲಹೆಗಳನ್ನ ಕೇಳಿದ್ದಾರೆ. 48 ವರ್ಷದಿಂದ ನಾನು ರಾಜಕಾರಣದಲ್ಲಿದ್ದೇನೆ ಎಂದರು.

ಕೆಲವು ಉಪಯುಕ್ತ ಚಿಂತನೆಗಳು ನಡೆಯುತ್ತಿದೆ. ಈ ಹಿನ್ನೆಲೆ ನನ್ನ ಅನುಭವದ ಆಧಾರದಲ್ಲಿ ಸಲಹೆಗಳನ್ನ ನೀಡಿದ್ದೇನೆ. ಎಲ್ಲಾ ನಿರ್ಧಾರಗಳನ್ನ ಪಕ್ಷದ ಹಿರಿಯರು ಕೈಗೊಳ್ಳಲಿದ್ದಾರೆ. ರಾಜ್ಯಧ್ಯಕ್ಷ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದರು.

ರಾಜ್ಯಸಭೆಗೆ ಹೆಚ್ ಡಿ ದೇವೇಗೌಡ ಪುನರಯ್ಕೆ ಕುರಿತು ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. NDA ಮೈತ್ರಿಕೂಟದಲ್ಲಿ ದೇವೇಗೌಡರಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರದ ಪ್ರಧಾನಿ ಮತ್ತು ಹೈ ಕಮಾಂಡ್ ತೀರ್ಮಾನ ಮಾಡುತ್ತಾರೆ. ದೇವೇಗೌಡರಿಗೆ ನೀಡುವ ಸ್ಥಾನಮಾನದ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ. ರಾಜ್ಯಸಭೆಗೆ ದೇವೇಗೌಡರನ್ನ ಕಳುಹಿಸುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ನನ್ನೊಂದಿಗೆ ಯಾರು ಚರ್ಚೆ ಮಾಡಿಲ್ಲ. ಪಕ್ಷ ನಮ್ಮ ನಾಯಕರು ಏನೂ ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೆವೆ. ಸರಕಾರ 55 ಕೇಸ್ ವಾಪಸ್ ಪಡೆದ ವಿಚಾರವಾಗಿ ರಾಜ್ಯ ಸರಕಾರದ ನಿಲುವಿನ ವಿರುದ್ದ ಕೇಂದ್ರ ಸಚಿವ ವಿ ಸೋಮಣ್ಣ ಕೆಂಡಕಾರಿದ್ದಾರೆ.

ಈ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿದ್ಯಾ?. ಮಾಡಬಾರದ ಪಾಪಾದ ಕೆಲಸವನ್ನ ರಾಜ್ಯ ಸರಕಾರ ಮಾಡಿದೆ. ಇದೊಂದು ತೊದಲುಗೊಂಬೆ ಸರಕಾರ. ಯಾವಾಗ ತೊಲಗುತ್ತೋ ಗೊತ್ತಿಲ್ಲ. ನಾನು 7 ಬಾರಿ ಶಾಸಕನಾದವನು, ಮಂತ್ರಿಯಾದವನು. ರಾಜ್ಯದ ಆಗು ಹೋಗುಗಳನ್ನ ತುಂಬಾ ಹತ್ತಿರದಿಂದ ನೋಡಿದವನು. ಇದೊಂದು ನಿರ್ಲಿಪ್ತ ಸರಕಾರ. ಸರಕಾರ ನಿಂತ ನೀರಾಗಿದೆ ಇಚ್ಛಾಶಕ್ತಿಯ ಕೊರತೆಯಿದೆ. ಅವರದ್ದೇ ಕೆಲವು ಟಾಸ್ಕ್ ಗಳನ್ನ ಹಾಕಿಕೊಂಡು ಜನರನ್ನ ದಾರಿ ತಪ್ಪಿಸುತ್ತಿದ್ದಾರೆ.

ಡಿಕೆ ಶಿವಕುಮಾರ್ ತಲೆಯಲ್ಲಿ ಏನಿದೆ? ಭಾವನೆಗಳು ಏನು ?ಗೊತ್ತಿಲ್ಲ. ಸರಕಾರದಲ್ಲಿ ಇನ್ನೇನು ಉಳಿದಿಲ್ಲ, ಜನ ತಕ್ಕ ಉತ್ತರ ನೀಡಲಿದ್ದಾರೆ. ಜನ ಉತ್ತರ ಕೊಡುವ ಕಾಲ ಹತ್ತಿರ ಬರುತ್ತಿದೆ. ಪ್ರಪಂಚಕ್ಕೆ ಗೊತ್ತಿದೆ ಅವರು ಮಾಡುತ್ತಿರುವ ಪಾಪದ ವ್ಯವಸ್ಥೆಗಳು. ಪಾಪಕ್ಕೆ ಪ್ರಾಯಶ್ಚಿತವಾಗುತ್ತೆ. ಯಾರ ಯಾರ ಓಲೈಕೆ ಮಾಡುತ್ತಿದ್ದಾರ. NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದರು.

ಇದು ಆಗಬಾರದಿತ್ತು ಆಗಿದೆ. ಅದರ ಹಿಂದೆ ಯಾರಿದ್ದಾರೆ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡಲು ಕ್ರಮವನ್ನ ಕೇಂದ್ರ ಸರಕಾರ ಕೈಗೊಳ್ಳುತ್ತೆ. ಮತ್ತೆ ರಾಜ್ಯ ರಾಜಕಾರಣ ವಿ ಸೋಮಣ್ಣ ಎಂಟ್ರಿ ವಿಚಾರವಾಗಿ
ಈ ಬಗ್ಗೆ ನನಗೆ ಗೊತ್ತಿಲ್ಲ, ರಾಷ್ಟ್ರದ ಪ್ರಧಾನಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ದೇಶ ಸುತ್ತಿ ನನ್ನ ಕೆಲಸ ಮಾಡುತ್ತಿದ್ದೇನೆ. ಮುಂದಿನ ತೀರ್ಮಾನವನ್ನ ನಮ್ಮ ಹೈ ಕಮಾಂಡ್ ನವರು ಮಾಡಲಿದ್ದಾರೆ. ಕಾಕ್ರೋಚ್ ಜನತಾ ಪಕ್ಷ ಕುರಿತು ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಇಂತಹ ಎಷ್ಟೋ ಪಕ್ಷ ಈ ದೇಶದಲ್ಲಿ ಹುಟ್ಟಿ ಮಾಯವಾಗಿದೆ. ಇವೆಲ್ಲ ಅಣಬೆಗಳಂತೆ ಹುಟ್ಟುತ್ತವೆ, ಮತ್ತೆ ಮಾಯಾವಾಗುತ್ತವೆ. ಸುಳ್ಳನ್ನ ಸತ್ಯವಾಗಿಸುವ ಪ್ರಯತ್ನವಾಗುತ್ತಿದೆ. ಮಂಗಳೂರನ್ನ ರೈಲ್ವೇ ವಿಭಾಗ ಮಾಡುವ ನಿಟ್ಟಿನಲ್ಲಿ ಚಿಂತನೆ ಇದೆ.

ಈ ಕುರಿತು ಸಭೆ ನಡೆಸಲಾಗುತ್ತಿದೆ. ಮಂಗಳೂರು ಮೂರು ರೈಲ್ವೇ ವಿಭಾಗಗಳಲ್ಲಿ ಹಂಚಿಹೋಗಿದೆ. ಈ ಮೂರನ್ನ ಬಿಟ್ಟು ಮಂಗಳೂರು ಪ್ರತ್ಯೇಕ ವಿಭಾಗ ಮಾಡಿದ್ರೆ ಅನುಕೂಲವಾಗಲಿದೆ. ಸುಬ್ರಹ್ಮಣ್ಯ -ಸಕಲೇಶಪುರ ನಡುವೆ 55 ಕಿಮೀ ರೈಲು ಮಾರ್ಗ ಪೂರ್ಣಗೊಂಡಿದೆ. ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನು ಒಂದು ತಿಂಗಳಲ್ಲಿ ಮಂಗಳೂರು ಬೆಂಗಳೂರು ವಂದೇ ಭಾರತ್ ರೈಲು ಓಡಾಟ ಆರಂಭವಾಗಲಿದೆ ಎಂದರು.