ಮಂಗಳೂರು: ಕೇರಳದಿಂದ ಮಂಗಳೂರಿಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.

ಶಸ್ತ್ರಾಸ್ತ್ರ ಎಲ್ಲಿ ತಯಾರಾಗ್ತಿದೆ, ಯಾರಿಗೆ ಮುಟ್ಟುತ್ತೋ ಅನ್ನೋ ತನಿಖೆಯಾಗಲಿ. ಅದರ ಮಧ್ಯವರ್ತಿ ಯಾರು ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ಮಾಡಲಿ. ಯಾರು ತರ್ತಾರೋ ಎಲ್ಲಿಗೆ ಕೊಡ್ತಾರೋ ಅನ್ನೋ ಸಮಗ್ರ ತನಿಖೆ ಆಗಲಿ. ಈ ಬಗ್ಗೆ ಪೊಲೀಸರು ‌ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಲಿ ಎಂದರು.