ಪರ್ಕಳ: ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸು ನಿಯಂತ್ರಣವಿಲ್ಲದ ಕುದುರೆಯಂತೆ ಅಲೆದಾಡುತ್ತಿದೆ. ಮೊಬೈಲ್ ಎಂಬ ಮಂತ್ರಶಕ್ತಿ ಅವರನ್ನು ಯಾವ ದಿಕ್ಕಿಗೆ ಎತ್ತಿಕೊಂಡು ಹೋಗುತ್ತಿದೆಯೋ ತಿಳಿಯುವುದೇ ಕಷ್ಟ. ಅದರ ಪರಿಣಾಮವಾಗಿ ನಕಾರಾತ್ಮಕ ಮನೋಭಾವ ಬೇರುಬಿಟ್ಟು, ಮಕ್ಕಳನ್ನು ಪ್ರಗತಿ ಪಥದಿಂದ ತಪ್ಪು ದಾರಿಯತ್ತ ಸರಿಸುವ ಅಪಾಯ ಹೆಚ್ಚಾಗಿದೆ. ಹದಿಹರೆಯ ಪ್ರವೇಶಿಸುವಷ್ಟರಲ್ಲಿ ಹಲವು ದುಶ್ಚಟಗಳು ಅವರ ಬದುಕಿನ ನೆರಳಾಗುತ್ತಿರುವುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ದಿಕ್ಕು ತಪ್ಪಿದ ಪರಿಸ್ಥಿತಿಯಿಂದ ಮಕ್ಕಳನ್ನು ಹೊರತರುವ ಶಕ್ತಿಯನ್ನು ಚಿತ್ರಕಲೆ, ಸಂಗೀತ, ಕ್ರೀಡೆ ಹಾಗೂ ಇತರೆ ಸೃಜನಾತ್ಮಕ ಹವ್ಯಾಸಗಳು ಹೊಂದಿವೆ. ಇವು ನಕಾರಾತ್ಮಕತೆಯನ್ನು ಸಕಾರಾತ್ಮಕ ಶಕ್ತಿಯಾಗಿ ರೂಪಾಂತರಿಸುವ ಸಾಮರ್ಥ್ಯವನ್ನು ನೀಡುತ್ತವೆ. ಆದ್ದರಿಂದ ಪೋಷಕರು ಈ ನಿಟ್ಟಿನಲ್ಲಿ ತಮ್ಮ ಗಮನ ಹರಿಸಬೇಕಾಗಿದೆ ಎಂದು ಡಾ. ಎ.ವಿ. ಬಾಳಿಗಾ ಆಸ್ಪತ್ರೆ, ದೊಡ್ಡಣಗುಡ್ಡೆಯ ವೈದ್ಯಕೀಯ ಅಧೀಕ್ಷಕ ಹಾಗೂ ಖ್ಯಾತ ಮನೋವೈದ್ಯ ಡಾ. ಪಿ. ವೆಂಕಟ್ರಾಯ ಭಂಡಾರಿ ಹೇಳಿದರು.

ನೇತಾಜಿ ಸ್ಪೋರ್ಟ್ಸ್ ಕ್ಲಬ್ ತನ್ನ ಸುವರ್ಣ ವರ್ಷಾಚರಣೆಯ ಅಂಗವಾಗಿ, ಜನಮೆಚ್ಚಿದ ಶಿಕ್ಷಕರಾದ ದಿವಂಗತ ಶಂಕರ್ ಕುಲಾಲ್ರವರ ಸ್ಮರಣಾರ್ಥ ಆಯೋಜಿಸಿದ್ದ ಸುವರ್ಣ ಹರುಷ – ಚಿಣ್ಣರ ಚಿತ್ರ ರಚನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾದ ಉಡುಪಿ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ, ಹಿರಿಯ ಚಿತ್ರಕಲಾವಿದ ರಮೇಶ್ ರಾವ್ ಮಾತನಾಡುತ್ತಾ“ಚಿತ್ರಕಲೆ ನಮ್ಮನ್ನು ಕಲ್ಪನಾತೀತ ಲೋಕಕ್ಕೆ ಕರೆದೊಯ್ಯುವ ಅಲೌಕಿಕ ಶಕ್ತಿ ಹೊಂದಿದೆ. ಮನದಂಗಳದಲ್ಲಿ ಸಂತಸದ ಹೂಗಳನ್ನು ಅರಳಿಸಿ, ನೋವು–ದುಗುಡಗಳನ್ನು ದೂರ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಚಿತ್ರಕಲೆಯನ್ನು ಹವ್ಯಾಸವನ್ನಾಗಿ ಸ್ವೀಕರಿಸಬೇಕು” ಎಂದು ಹೇಳಿದರು.

ಸಭಾಧ್ಯಕ್ಷರಾಗಿದ್ದ ರಾಮಮೂರ್ತಿ ಭಟ್ ಮಾತನಾಡಿ,ಚಿತ್ರಕಲಾ ಸ್ಪರ್ಧೆಗಳು ಮಕ್ಕಳ ಏಕತಾನತೆಯನ್ನು ಕರಗಿಸಿ, ಒತ್ತಡದಿಂದ ಮುಕ್ತಗೊಳಿಸುವ ಶಕ್ತಿಯುತ ವೇದಿಕೆಯಾಗಿದೆ ಎಂದರು. ಮಣಿಪಾಲದ ಚಿತ್ರಕಲಾವಿದ ಸತೀಶ್ಚಂದ್ರ ಒಂದೇ ಗಂಟೆಯಲ್ಲಿ ರಚಿಸಿದ ಅದ್ಭುತ ಜಲವರ್ಣ ಕಲಾಕೃತಿಯು ಪ್ರೇಕ್ಷಕರ ಹೃದಯ ಗೆದ್ದಿತು.
ಸಮಾರಂಭದಲ್ಲಿ ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಮಣಿಪಾಲ, ಉಡುಪಿ ಆರ್ಟಿಸ್ಟ್ಸ್ ಫೋರಂ ಕಾರ್ಯದಶಿ೯ ಸಕು ಪಾಂಗಾಳ, ಪರ್ಕಳ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಹಾಗೂ ಬೆಂಗಳೂರು ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಕಂಪನಿಯ ತಾರಾ ಶಶಾಂಕ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಹೇಶ್ ಪ್ರಭು ವಂದನಾರ್ಪಣೆ ಸಲ್ಲಿಸಿದರು. ಖಜಾಂಚಿ ರವೀಂದ್ರ ಆಚಾರ್ಯ ಬಹುಮಾನ ವಿತರಣೆಯನ್ನು ನಿರ್ವಹಿಸಿದರು.
ಸ್ಪರ್ಧೆಯಲ್ಲಿ ೩೫೦ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು ಈ ಕೆಳಗಿನ ಸ್ಪರ್ಧಿಗಳು ಬಹುಮಾನವನ್ನು ಗೆದ್ದುಕೊಂಡರು: ಕಿಂಡರ್‌ಗಾಟ೯ನ್‌ವಿಭಾಗ: ೧. ಭಕ್ತಿಶ್ರೀ ಬಾಯರಿ, ವಿದ್ಯೋದಯ ಉಡುಪಿ ೨. ವೆಂಕಟೇಶ ವಂಶಿ ಕೃಷ್ಣ, ವಿದ್ಯೋದಯ ಉಡುಪಿ ೩. ಅನಯ್‌ಶೆಟ್ಟಿಗಾರ್, ಸೈಂಟ್‌ಮೇರೀಸ್, ಉಡುಪಿ

ಸಮಾಧಾನಕರ ಬಹುಮಾನಗಳು: ಆಗ್ನ್ಯ ಆಚಾರ್ಯ, ನಚಿಕೇತ ಸರಳೇಬೆಟ್ಟು, ಸಾದ್ವಿನ್, ಕ್ರೈಸ್ಟ್‌ಸ್ಕೂಲ್, ಮಣಿಪಾಲ, ಸಾಂಗತ್ಯ, ಎಸ್.ಎಂ.ಎಸ್., ಬ್ರಹ್ಮಾವರ, ಸುಚಿತ್ ಕೆ., ಪರ್ಕಳ, ಲಕ್ಷ್ಯ ಡಿ ಪೂಜಾರಿ, ಲಿಟಲ್ ರಾಕ್, ಬ್ರಹ್ಮಾವರ, ದಿತ್ಯ ನಾಯಕ್, ಮಾಧವಕೃಪಾ ಮಣಿಪಾಲ, ಯಾದ್ವಿ ದೇವಾಡಿಗ, ಕರ್ನಾಟಕ ಪಬ್ಲಿಕ್‌ಸ್ಕೂಲ್, ಹಿರಿಯಡಕ
ಪ್ರೈಮರಿ ವಿಭಾಗ: ೧. ಆರ್ಯ ಪೈ, ಪೋದಾರ್‌ಇಂಟರ್‌ನೇಶನಲ್‌ಸ್ಕೂಲ್, ೨. ಭವಾನಿ, ವಿದ್ಯೋದಯ ಉಡುಪಿ ೩. ನಮ್ಯಶ್ರೀ , ಜಿ.ಎಂ. ವಿದ್ಯನಿಕೇತನ ಬ್ರಹ್ಮಾವರ
ಸಮಾಧಾನಕರ ಬಹುಮಾನಗಳು: ಆದೀಶ್ ಪೂಜಾರಿ, ಕಾಜಾರಗುತ್ತು, ವಾಸವಿ ಪುತ್ರನ್, ಎಸ್‌ಆರ್‌ಪಬ್ಲಿಕ್, ಹೆಬ್ರಿ, ವೇದಾಂತ ಶೆಟ್ಟಿ, ಜಿ.ಎಂ. ವಿದ್ಯನಿಕೇತನ ಬ್ರಹ್ಮಾವರ, ಭನ್ವಿಶ್ರೀ, ಜಿ.ಎಂ. ವಿದ್ಯನಿಕೇತನ ಬ್ರಹ್ಮಾವರ, ರಾನ್ಯ ರಾವ್, ವಿದ್ಯೋದಯ್‌ಉಡುಪಿ, ಬಿನಿಷಾ ನಾಯ್ಕ್, ಭಾರ್ಗವಿ, ಮೇಗುಲ್, ಹಿಮಾಮಿ ಕಕೇರ, ಹರ್ಷಿಕ್‌ಕುಂದರ್- ಎಲ್ಲರೂ ಮಾಧವ ಕೃಪಾ ಮಣಿಪಾಲ. ಪ್ರಹ್ಲಾದ್‌ನಾಯಕ್, ಪೋದಾರ್‌ಇಂಟರ್‌ನೇಶನಲ್, ಬೃಂದಶ್ರೀ ಶೆಟ್ಟಿ, ಕರ್ನಾಟಕ ಪಬ್ಲಿಕ್, ಹಿರಿಯಡಕ, ಅನುಷ್ಕ ನಾಯಕ್, ಗ್ರೀನ್‌ಪಾರ್ಕ್, ಹಿರಿಯಡಕ
ಹೈಯರ್‌ಪ್ರೈಮರಿ ವಿಭಾಗ: ೧. ಪ್ರಭಾತ್‌ಉಡುಪ, ಅಮೃತ ಭಾರತಿ, ಹೆಬ್ರಿ ೨. ಪ್ರಣೀತ್, ಅಮೃತ ಭಾರತಿ, ಹೆಬ್ರಿ , ೩. ಹಿರಣ್ಮಯಿ ಭಟ್, ಮಾಧವ ಕೃಪ, ಮಣಿಪಾಲ
ಸಮಾಧಾನಕರ ಬಹುಮಾನಗಳು: ವಷ೯ ಕಾಮತ್, ಧ್ಯಾನೇಶ್‌ಕುಲಾಲ್, ರಿಷಬ್‌ಭಂಡಾರಿ – ಎಲ್ಲರೂ ಮಾಧವಕೃಪಾ, ಮಣಿಪಾಲ, ಶಮಂತ್‌ಆಚಾರ್ಯ, ಬಾಸೆಲ್‌ಮಿಷನ್‌ಪರ್ಕಳ, ಕಾರ್ತಿಕ್‌ಪ್ರಭು, ಗ್ರೀನ್‌ಪಾರ್ಕ್‌ಹಿರಿಯಡಕ, ನಿಹಾರಿಕ, ವಿದ್ಯೋದಯ ಉಡುಪಿ, ಚಿನ್ಮಯಿ ಶೆಟ್ಟಿ, ರಾಷ್ಟ್ರೋತ್ಥಾನ ಚೇರ್ಕಾಡಿ, ವಿಯಾನ್‌ದೇವಾಡಿಗ, ಕ್ರೈಸ್ಟ್‌ಕಿಂಗ್, ಮಣಿಪಾಲ, ನಿಖಿಲ್‌ಪೆರ್ಡೂರು ಶಾಲೆ, ತೇಜಸ್‌ಶೆಟಿ, ಜಿ.ಎಂ.ವಿದ್ಯನೀಕೇತನ, ಬ್ರಹ್ಮಾವರ
ಪ್ರೌಢ ಶಾಲಾ ವಿಭಾಗ: ೧. ವಿನೀಶ್‌ಆಚಾರ್ಯ, ಎಸ್‌ಆರ್‌ಪಬ್ಲಿಕ್‌ಸ್ಕೂಲ್, ಹೆಬ್ರಿ, ಕೃಷ್ಣ ಪ್ರಸಾದ್, ಅಮೃತ ಭಾರತಿ ಹೆಬ್ರಿ , ಪ್ರಥ್ವಿರಾಜ್, ವಿದ್ಯೋದಯ ಉಡುಪಿ
ಸಮಾಧಾನಕರ ಬಹುಮಾನಗಳು: ಪ್ರಥಮ್‌ಕಾಮತ್, ಶಾಂತಿನಿಕೇತನ ಅಲೆವೂರು, ಅದಿತಿ, ಹೆಣ್ಮಕ್ಕಳ ಪ್ರೌಢ ಶಾಲೆ, ಉಡುಪಿ, ವೀಕ್ಷಿತ, ಪರ್ಕಳ ಹೈಸ್ಕೂಲ್, ಬಿಂದುಶ್ರೀ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ.

