ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರಕೊಟ್ಲೂ ಟೋಲ್ ಗೇಟ್ ಬಳಿ ನಿನ್ನೆ ಸಂಜೆ ಟ್ರಕ್ ಡ್ರೈವರ್ ಮೇಲೆ ಟೋಲ್ ಸಿಬ್ಬಂದಿಯಿಂದ ಹಲ್ಲೆ ಸೋಶಿಯಲ್ ಮೀಡಿಯಾ ದಲ್ಲಿ ವೀಡಿಯೊ ವೈರಲ್ ಆಗಿದೆ.

ಮೊದಲೇ ಹೊಂಡ ಗುಂಡಿಯಿಂದ ಕೂಡಿದ ರಸ್ತೆ ಇಂತಹ ರಸ್ತೆಗೆ ಟೋಲ್ ಕಟ್ಟುವ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅದರ ಜೊತೆ ಇಂತಹ ವರ್ತನೆ ತೋರುತ್ತಿರುವ ಇಲ್ಲಿನ ಸಿಬ್ಬಂದಿ ಈ ಟೋಲ್ ಗೇಟ್ ಯಾವ ಕಾರಣಕ್ಕೆ ಇದೆ ಈ ಟೋಲ್ ನ ಹಿಂದೆ ಯಾವ ಸಂಸ್ಥೆ ಇದೆ.

ಈ ಟೋಲ್ ನಿಂದ ಯಾರಿಗೆ ಲಾಭ ಎಂಬುದೂ ಸಾರ್ವಜನಿಕರು ಎತ್ತಿರುವ ಪ್ರಶ್ನೆ. ಹಲ್ಲೆ ಮಾಡಿದ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹ ಮತ್ತು ಹಲ್ಲೆ ಮಾಡಿದನ್ನ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.