ದಕ್ಷಿಣ ಕನ್ನಡ: “ಮಾ. 10ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕಠಿಣ ಹೋರಾಟ ಫಿಕ್ಸ್” ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.
ಮಾ. 11ರಿಂದ 15ರವರೆಗೆ ಕಪ್ಪು ಪಟ್ಟಿ ಧರಿಸಿ ಕೇವಲ ತುರ್ತು ಸೇವೆಗೆ ವೈದ್ಯರು ಸೀಮಿತವಾಗಲಿದ್ದು, ಒಂದು ವೇಳೆ ಸರಕಾರ ಬಗ್ಗದಿದ್ದರೆ ಮಾ. 16ರಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿ ಬೀದಿಗೆ ಇಳಿಯೋದಾಗಿ ಎಚ್ಚರಿಸಿದ್ದಾರೆ.

