ಮಂಗಳೂರು: ನವಮಂಗಳೂರು ಬಂದರು (NMPT) ಆವರಣದ ಭೂಭಾಗದಲ್ಲಿ ಇಂದು ಅನಿರೀಕ್ಷಿತವಾಗಿ ದೈತ್ಯ ಸುಂಟರಗಾಳಿಯೊಂದು ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಇಂತಹ ದೃಶ್ಯಗಳು ಕಂಡುಬರುತ್ತವೆಯಾದರೂ, ಈ ಬಾರಿ ಭೂಮಿಯ ಮೇಲೆಯೇ ಧೂಳು ಮತ್ತು ಗಾಳಿ ಸುರುಳಿಯಾಕಾರದಲ್ಲಿ ಎತ್ತರಕ್ಕೆ ಜಿಗಿದಿರುವುದು ಕಂಡುಬಂದಿದೆ.

ಬಂದರು ಆವರಣದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಈ ಭಯಾನಕ ದೃಶ್ಯವನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ವಾತಾವರಣದಲ್ಲಿನ ತಾಪಮಾನ ಏರಿಕೆ ಮತ್ತು ಗಾಳಿಯ ಒತ್ತಡದ ವ್ಯತ್ಯಾಸದಿಂದ ಇಂತಹ ‘ಡಸ್ಟ್ ಡೆವಿಲ್’ ಮಾದರಿಯ ಸುಂಟರಗಾಳಿ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

View this post on Instagram

A post shared by News Karnataka (@newskarnataka)