ಮಂಗಳೂರು : ಹಿಂದು ಜಾಗರಣಾ ವೇದಿಕೆ ತಲಪಾಡಿ ವಲಯ ಬಜಿಲಕೇರಿ ಟೈಗರ್ಸ್ ಊದು ಪೂಜೆ ನಡೆಯಿತು. ನೆರೆಯ ರಾಜ್ಯ ಕೇರಳದಲ್ಲಿ ಓಣಂ ಪ್ರಯುಕ್ತ ಹುಲಿ ಕುಣಿತ ಸ್ಪರ್ಧೆ ನಡೆಯುತ್ತದೆ. ಹುಲಿ ಕುಣಿತ ಸ್ಪರ್ಧೆಯಲ್ಲಿ ಬಜಿಲಕೇರಿ ಟೈಗರ್ಸ್ ಭಾಗವಹಿಸಲಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಹುಲಿ ವೇಷ ತಂಡ ಕೇರಳದಲ್ಲಿ ಭಾಗವಹಿಸುವ ಹೆಗ್ಗಳಿಕೆ ಪಡೆಯಲಿದೆ. ಕಾಸರಗೋಡು ಜುಂಕ್ಷನ್ ಬಳಿ ನವಿವಿಧ ತಂಡಗಳ ಹುಲಿ ಕುಣಿತ ಸ್ಪರ್ಧೆ ನಡೆಯಲಿದೆ. ತಲಪಾಡಿ ದೇವಿಪುರದಲ್ಲಿ ಊದು ಕಾರ್ಯಕ್ರಮ ನಡೆಯಿತು. ಊದು ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

ಕೇರಳದಲ್ಲಿ ಬಜಿಲಕೇರಿ ಟೈಗರ್ಸ್ ಜಯಗಳಿಸಿ ಎಂದು ಗಣ್ಯಾತಿಗಣ್ಯರು ಶುಭಹಾರೈಕೆ ಮಾಡಿದರು. ಶೈಲೇಶ್ ಬಜಿಲಕೇರಿ ನೇತೃತ್ವದ ಬಜಿಲಕೇರಿ ಟೈಗರ್ಸ್ ಇದಾಗಿದೆ.