ಮಂಗಳೂರು: ಬಜಪೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಜನಾಗ್ರಹ ಸಭೆಯಲ್ಲಿ ಸುಹಾಸ್ ಶೆಟ್ಟಿ ತಾಯಿ ಸುಲೋಚನ ಶೆಟ್ಟಿ ಭಾಷಣ ಮಾಡಿ, ಸುಹಾಸ್ ನ ಸಾವು ಗೆ ನ್ಯಾಯ ಸಿಗಬೇಕು. ಈ ಸರ್ಕಾರ ಪೊಲೀಸರನ್ನು ಸರಿಯಾಗಿ ತನಿಖೆ ಮಾಡಲು ಬಿಡೋದಿಲ್ಲ. ಸುಹಾಸ್ ನನ್ನು ೫೦ ಕ್ಕೂ ಅಧಿಕ ಜನ ಚಿತ್ರ ಹಿಂಸೆ ನೀಡಿ ಕೊಂದಿದ್ದಾರೆ ಎಂದರು.
ಪರಮೇಶ್ವರ್, ಗುಂಡೂರಾವ್ ಸುಹಾಸ್ ನನ್ನು ರೌಡಿ ಅಂತಾ ಹೇಳಿದ್ರು, ಆದರೆ ಸುಹಾಸ್ ರೌಡಿ ಅಲ್ಲ, ಈ ತನಿಖೆಯನ್ನು ಎನ್ ಐ ಎ ಯಿಂದ ಮಾಡಿದರೆ ನ್ಯಾಯ ಸಿಗುತ್ತದೆ. ನನ್ನ ಮಗನ ಸಾವಿಗೆ ನ್ಯಾಯ ಸಿಗುವ ವರೆಗೆ ಹೋರಾಟ ಮಾಡಬೇಕು ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನ ಶೆಟ್ಟಿ ಹೇಳಿದರು.

