ಮಂಗಳೂರು: ಮಹಿಳೆಯ ಸರಗಳ್ಳತನ ಮಾಡಿ ಬಟ್ಟೆ ಬದಲಿಸಿ ಕಳ್ಳ ಎಸ್ಕೇಪ್ ಆದ ಘಟನೆ ಮಂಗಳೂರಿನ ಕೊಂಚಾಡಿ ಬಳಿಯ ಕೊಪ್ಪಲಕಾಡಿನಲ್ಲಿ ನಡೆದಿದೆ.
ಸರಕಳ್ಳತನ ಮಾಡಿ ಕಳ್ಳ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ 6-30ರ ಸುಮಾರಿಗೆ ಸರಗಳ್ಳತನ ಘಟನೆ ನಡೆದಿದೆ. ಸರ ಕದ್ದು ಮನೆ ಕಾಂಪೌಂಡ್ ಒಳಗೆ ಹೋಗಿ ಗೋಡೆ ಹಾರಿ ಕಳ್ಳ ಪರಾರಿಯಾಗಿದ್ದಾನೆ.
ಸ್ವಲ್ಪ ದೂರ ಹೋಗಿ ಮತ್ತೆ ಬಟ್ಟೆ ಬದಲಾವಣೆ ಮಾಡಿ ಕಣ್ಮರೆಯಾಗಿದ್ದಾನೆ. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮಹಿಳೆಯ ಮೂರುವರೆ ಪವನ್ ತೂಕದ ಸರ ಕಳ್ಳತನವಾಗಿದೆ. ಸ್ಥಳಕ್ಕೆ ಉರ್ವಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

