ಮಂಗಳೂರು: ಕುಡುಪು ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಟಿ ನಡೆಸಿದರು. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ಸಂದರ್ಭದಲ್ಲಿ ಬಾರದಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.

ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಹತ್ಯೆಯಾದಗ ಬರಬೇಕೆಂದು ಏನು ಇಲ್ಲ. ಘಟನೆ ಬಗ್ಗೆ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮೂರನೇ ತಾರೀಖು ಬರ್ತಾರಲ್ಲ. ಈಗಾ ಅವರು ಕೊಂದು ಆಗಿದೆ ಕೊಲ್ಲುವ ಮೊದಲು ಬರ್ತಿದ್ರೆ ಏನಾದ್ರೂ ಮಾಡಬಹುದಿತ್ತು.

ಕೊಂದು ಆದ ಮೇಲೆ ಇವತ್ತು ಬಂದ್ರು ಒಂದೇ ನಾಳೆ ಬಂದ್ರು ಒಂದೇ…? ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ನಾವು ಏನ್ ಮಾಡೋದು ಅಲ್ಲಿ ಹೋಗಿ ಗನ್ ಹಿಡಿದುಕೊಂಡು ಇರ್ಬೇಕಾ. ನಾವು ಭಯೋತ್ಪಾದಕರಲ್ಲ ಎಂದು ಮಂಗಳೂರಿನಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿಕೆ ನೀಡಿದರು.